ಉದಯವಾಹಿನಿ, ಬೆಂಗಳೂರು: ಅಕ್ರಮ ಮುಸ್ಲಿಂ ವಲಸಿಗರು ಭಯೋತ್ಪಾದನೆ ಹಾಗೂ ಜನೋತ್ಪಾದನೆಯಲ್ಲಿ ನಿರಂತರವಾಗಿ ತೊಡಗಿದ್ದಾರೆ. ದೇಶದಿಂದ ಇವರನ್ನು ತೊಲಗಿಸಿದರೆ ಮಾತ್ರ ದೇಶಕ್ಕೂ, ಹಿಂದೂಗಳಿಗೂ ಉಳಿಗಾಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ. ಬೆಂಗಳೂರಿನ ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು. ಈ ವೇಳೆ, ರೋಹಿಂಗ್ಯಾ ಮುಸ್ಲಿಮರು, ಪಾಕ್ ಮುಸ್ಲಿಮರು ಭಾರತಕ್ಕೆ ಬರಲಿ ಎನ್ನುವ ಮನಸ್ಥಿತಿ ಕಾಂಗ್ರೆಸ್ ನವರದ್ದು. ನಮ್ಮ ಮಹಿಳೆಯರಿಗೆ ಒಂದು ಮಗುವನ್ನು ಹೆರೋದ್ರೊಳಗೆ ಸೊಂಟ ಬಿದ್ದು ಹೋಗುತ್ತದೆ. ಆದರೆ ಅಕ್ರಮ ಮುಸ್ಲಿಂ ವಲಸಿಗರು ಪುರುಸೊತ್ತಿಲ್ಲದೇ ಮಕ್ಕಳನ್ನು ಹೆರುತ್ತಲೇ ಇರುತ್ತಾರೆ. ಈ ವಲಸಿಗರು ಭಾರತದಲ್ಲಿದ್ರೆ ನಮ್ಮ ಜಾಗ ಕಬಳಿಸ್ತಾರೆ. ಭಯೋತ್ಪಾದನೆ ಜತೆಗೆ ಪುರುಸೊತ್ತಿಲ್ಲದೇ ಜನೋತ್ಪಾದನೆ ಮಾಡ್ತಾರೆ. ಹಿಂದೂಗಳಿಗೆ ಇರೋದು ಒಂದೇ ದೇಶ, ನಮಗೆ ಯಾರೂ ಆಶ್ರಯ ಕೊಡಲ್ಲ. ಭಾರತವನ್ನು ಭಾರತವಾಗಿ ಉಳಿಸಿಕೊಳ್ಳಬೇಕು ಎಂದಿದ್ದಾರೆ.

ಅಕ್ರಮ ಬಾಂಗ್ಲಾದವರು ಕಡಿಮೆ ಹಣಕ್ಕೆ ಸಿಗ್ತಾರೆ ಎಂದು ಕೆಲಸಕ್ಕೆ ಸೇರಿಸಿಕೊಳ್ಳಬೇಡಿ. ಅವರು ಬಂದಿರೋ ಉದ್ದೇಶವೇ ಬೇರೆ. ನಾವು ಎಚ್ಚೆತ್ತುಕೊಳ್ಳಬೇಕು. ಮೋದಿಯವರನ್ನು ಎರಡು ಬಾರಿ ಬಹುಮತದ ಮೂಲಕ ಗೆಲ್ಲಿಸಿದ್ರಿ. ಕಳೆದ ಬಾರಿ ನೀವು ಸ್ವಲ್ಪ ಸೋಮಾರಿ ಆಗಿದ್ದಕ್ಕೆ 242 ಸೀಟು ನೀಡಿದ್ರಿ. ಮತ್ತೊಮ್ಮೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮದು ಹಿಂದೂ ರಾಷ್ಟ್ರ. ನಮಗೆ ಬೇರೆ ಎಲ್ಲೂ ನೆಲೆ ಇಲ್ಲ. ಹೀಗಾಗಿ ನಾವು ನಮ್ಮ ದೇಶ ಉಳಿಸಬೇಕು. ಈ ಹೋರಾಟ ರಾಜಕೀಯ ಕಾರಣಕ್ಕೆ ಅಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!