ಉದಯವಾಹಿನಿ, ಬೆಂಗಳೂರು: ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಾಣಿಗಳು, ಫ್ರಿಡ್ಜ್, ವಾಷಿಂಗ್ ಮೆಷಿನ್ ಸಹ ಸಾಗಿಸಬಹುದು. ಹೌದು. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಈಗ ಆದಾಯ ಸಂಗ್ರಹಿಸಲು ನಾನಾ ದಾರಿ ಹುಡುಕುತ್ತಿರುವ ಕೆಎಸ್‌ಆರ್‌ಟಿಸಿ ಲಗೇಜ್‌ಗೆ ಮಾಡಿದೆ. ಗರಿಷ್ಠ 30 ಕೆಜಿ ಮೇಲೆ ಲಗೇಜ್ ಇದ್ದರೆ ಕಡ್ಡಾಯವಾಗಿ ಹಣವನ್ನು ಪಾವತಿ ಮಾಡಲೇಬೇಕಾಗುತ್ತದೆ. ನಾಯಿಯನ್ನ ಚೈನಿನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ಸಿನಲ್ಲಿ ಸಾಗಿಸಬಹುದು. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು.
ಪ್ರಯಾಣಿಕರು 4 ಅಥವಾ 5 ಜನರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದು. ಒಂದು ಬ್ಯಾಗ್ ಅಥವಾ ಬಂಡಲ್ ಲಗೇಜ್ ಕೊಂಡೊಯ್ಯುತ್ತಿದ್ದಲ್ಲಿ ಉಚಿತ ಸಾಗಣೆಯು ಒಬ್ಬ ಪ್ರಯಾಣಿಕರಿಗೆ ಮಾತ್ರ (30 ಕೆಜಿ) ಅನ್ವಯಿಸುತ್ತದೆ. ಒಬ್ಬರು ಮಾತ್ರ ಉಚಿತವಾಗಿ ಲಗೇಜ್ ಕೊಂಡೊಯ್ಯಬಹುದು.ಪ್ರಯಾಣಿಕರು ಲಗೇಜ್ ಅನ್ನ ಸರಿಯಾಗಿ ತೂಕ ಮಾಡಿಸಿಕೊಂಡು ಬರಬೇಕಾಗುತ್ತದೆ. ಯಂತ್ರದ ತೂಕವಿಲ್ಲದಿದ್ದರೆ ಅಂದಾಜು ತೂಕದ ಲಗೇಜ್ ಅನ್ನು ಪರಿಗಣಿಸಲಾಗುತ್ತದೆ.
