ಉದಯವಾಹಿನಿ, ಬೆಂಗಳೂರು: ಭಾರತದ ಪ್ರಮುಖ ಎನ್ ಎ ಬಿ ಎಚ್ ಮಾನ್ಯತೆ ಪಡೆದ ಪ್ರಿಸಿಷ್ ಆಯುರ್ವೇದ ಆಸ್ಪತ್ರೆ ಜಾಲವಾಗಿರುವ ಅಪೋಲೋ ಆಯುರ್‌ವೈದ್ ಸಂಸ್ಥೆಯು ಆಯುರ್ವೇದ ಉತ್ಪನ್ನಗಳ ವಿಭಾಗಕ್ಕೆ ಪ್ರವೇಶಿಸಿದ್ದು, ಈ ಮೂಲಕ ವೈದ್ಯಕೀಯ ಚಿಕಿತ್ಸೆ ಒದಗಿಸುವುದರ ಜೊತೆಗೆ ಉತ್ಪನ್ನ ವಿಭಾಗಕ್ಕೆ ವಿಸ್ತರಣೆ ಹೊಂದಿದೆ.
ಸಂಸ್ಥೆಯು ಶಾಸ್ತ್ರೀಯ ಸೂತ್ರೀಕರಣಗಳು, ಓಟಿಸಿ ಉತ್ಪನ್ನಗಳು ಮತ್ತು ವೈದ್ಯಕೀಯ ಆಹಾರ ವಿಭಾಗದಲ್ಲಿ ಹಲವಾರು ಉತ್ಪನ್ನಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಮೂಲಕ ಭಾರತದ ₹60,000 ಕೋಟಿ ಮೌಲ್ಯದ, ವಾರ್ಷಿಕವಾಗಿ ಶೇ.16 ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಸುರಕ್ಷಿತ, ಕ್ಲಿನಿಕಲ್ ಆಗಿ ಮಾನ್ಯವಾದ ಆಯುರ್ವೇದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶ ಹೊಂದಿದೆ.
ಉದ್ಯಮದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿರುವ ಅಪೋಲೋ ಆಯುರ್ವೈದ್ ನ ಉತ್ಪನ್ನ ಶ್ರೇಣಿಯು ಎನ್ ಎ ಬಿ ಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಭಾರೀ ಲೋಹಗಳು, ಆಫ್ಲಾಟಾಕ್ಸಿನ್ ಗಳು, ಸೂಕ್ಷ್ಮಜೀವಿಗಳ ಅಂಶ ಇತ್ಯಾದಿ ವಿಚಾರದಲ್ಲಿ ಸುರಕ್ಷತೆಯನ್ನು ಪರೀಕ್ಷಿಸಿ ಪ್ರಮಾಣೀಕರಿಸಲಾದ, ಕ್ಲಿನಿಕಲ್ ಆಗಿ ಸಾಬೀತಾದ ಸೂತ್ರೀಕರಣಗಳನ್ನು (ಫಾರ್ಮುಲೇಷನ್ ಗಳನ್ನು) ಒಳಗೊಂಡಿದೆ. ಅಪೋಲೋ ಆಯುರ್ವೈದ್ ನ ಉತ್ಪನ್ನಗಳು ಆಯುರ್ವೇದ ಉತ್ಪನ್ನ ಮಾರುಕಟ್ಟೆಯಲ್ಲಿ ಗರಿಷ್ಠ, ಪುರಾವೆ- ಆಧಾರಿತ ಸುರಕ್ಷತಾ ಮಾನದಂಡವನ್ನು ಸ್ಥಾಪಿಸಿದ್ದು, ವಿಶೇಷ ವಾಗಿ ಗ್ರಾಹಕರು ತೆಗೆದುಕೊಳ್ಳುವ ಪ್ರತೀ ಉತ್ಪನ್ನದ ಪರೀಕ್ಷಾ ಫಲಿತಾಂಶಗಳನ್ನು (ಪ್ಯಾಕೇಜಿಂಗ್ ಮೇಲೆ ಇರುವ ಕ್ಯೂಆರ್ ಕೋಡ್ ಮುಖಾಂತರ) ಪರಿಶೀಲಿಸಬಹುದು. ಸಂಸ್ಥೆಯ ಈ ನಡವಳಿಕೆಯು ಆತ್ಮವಿಶ್ವಾಸದಿಂದ ನಂಬಬಹುದಾದ ಸುರಕ್ಷಿತ, ಪ್ರಮಾಣಿತ ಮತ್ತು ಪರಿಣಾಮಕಾರಿ ಆಯುರ್ವೇದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುವ ಅಪೋಲೋ ಆಯುರ್ವೈದ್ ಸಂಸ್ಥೆಯ ಸಂಕಲ್ಪವನ್ನು ತೋರಿಸುತ್ತದೆ.
ಈ ಕುರಿತು ಮಾತನಾಡಿರುವ ಅಪೋಲೋ ಆಸ್ಪತ್ರೆಗಳ ಕಾರ್ಯಕಾರಿ ಉಪಾಧ್ಯಕ್ಷೆ ಮತ್ತು ಅಪೋಲೋ ಆಯುರ್ವೈದ್ ನ ಚೇರ್ ಪರ್ಸನ್ ಡಾ. ಪ್ರೀತಾ ರೆಡ್ಡಿ ಅವರು, “ಪರೀಕ್ಷೆಗೊಳಪಟ್ಟಿ ರುವ ಸುರಕ್ಷಿತ ಆಯುರ್ವೇದ ಉತ್ಪನ್ನ ವಿಭಾಗಕ್ಕೆ ಅಪೋಲೋ ಆಯುರ್ವೈದ್ ನ ಪ್ರವೇಶ ಮಾಡಿರುವುದು ಸಾಂಪ್ರದಾಯಿಕ ಔಷಧದಲ್ಲಿ ಸುರಕ್ಷತೆ, ಪಾರದರ್ಶಕತೆ ಮತ್ತು ಪರಿಣಾಮ ಕಾರಿತ್ವದ ಮಾನದಂಡಗಳನ್ನು ಮರುರೂಪಿಸುವುದರಲ್ಲಿ ಒಂದು ಪ್ರಮುಖ ಮತ್ತು ಮಹತ್ವದ ಹೆಜ್ಜೆಯಾಗಿದೆ. ಸಂಸ್ಥೆಯ ಈ ವಿಸ್ತರಣೆಯು ವೈದ್ಯಕೀಯ ಚಿಕಿತ್ಸೆಯ ಬಲವಾದ ಅಡಿಪಾಯದ ಮೇಲೆ ನಿರ್ಮಿತವಾಗಿದೆ ಮತ್ತು ಪುರಾವೆ- ಆಧಾರಿತ, ಪ್ರಿಸಿಷನ್ ಆಯುರ್ವೇದದ ಮೇಲೆ ಸಂಸ್ಥೆಯು ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆವಿಷ್ಕಾರವನ್ನು ಕಾಲಾನು ಕಾಲಕ್ಕೆ ತಕ್ಕ ಬುದ್ಧಿವಂತಿಕೆ ಜೊತೆಗೆ ಸಂಯೋಜಿಸುವ ಮೂಲಕ ಅಪೋಲೋ ಆಯುರ್‌ವೈದ್ ಸಂಸ್ಥೆಯು ಭಾರತ ಮತ್ತು ಅದರಾಚೆಗಿನ ಸಂಯೋಜಿತ ಔಷಧ ವಿಭಾಗದ ಭವಿಷ್ಯವನ್ನು ರೂಪಿಸುವ ದಾರಿಯಲ್ಲಿ ಮುನ್ನಡೆಯುತ್ತಿದೆ” ಎಂದು ಹೇಳಿದರು.
