ಉದಯವಾಹಿನಿ,ಜರ್ಮನಿ: ಜರ್ಮನಿಯ ಮ್ಯೂನಿಚ್ ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸತತ 2ನೇ ವರ್ಷದ ನಾಟ್ಯ ಫೆಸ್ಟ್ ಯಶಸ್ವಿಯಾಗಿ ನೆರವೇರಿತು. ಪ್ರಸಿದ್ದ ಕಲಾವಿದೆ ಡಾ.ವಸುಂಧರಾ ದೊರಸ್ವಾಮಿ ಮತ್ತು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಸತ್ಯ ಹೇಮರಾಜನಿ ಸಮಾರಂಭ ಉದ್ಘಾಟಿಸಿದರು. ಭರತನಾಟ್ಯ, ಕುಚುಪುಡಿ, ಒಡಿಸ್ಸಿ,, ಕಥಕ್ ನಂತಹ ವಿವಿಧ ಸಮೂಹ ನೃತ್ಯಗಳನ್ನು ಕಲಾವಿದರು ಪ್ರಸ್ತುತಪಡಿಸಿದರು. ಭರತನಾಟ್ಯ ಕಲಾವಿದೆ ಶುಭದಾ ಸುಬ್ರಮಣ್ಯಂ ಕಾರ್ಯಕ್ರಮ ಆಯೋಜಿಸಿದ್ದರು. ಸುಮಾರು 350ಕ್ಕೂ ಹೆಚ್ಚು ಪ್ರೇಕ್ಷಕರಿಂದ ಕಿಕ್ಕಿರಿದಿದ್ದ ಸಭಾಂಗಣದಲ್ಲಿ ಶೇ.70ರಷ್ಟು ಪ್ರೇಕ್ಷಕರು ಭಾರತೀಯೇತರರು ಎಂಬುದು ವಿಶೇಷವಾಗಿತ್ತು.
ಮ್ಯೂನಿಕ್ ನ ಸ್ಥಳೀಯ ರಂಗಮಂದಿರ ಕಲ್ತುರ್ಜೆಂಟ್ರಮ್ ಟ್ರೂಡೆರಿಂಗ್ನಲ್ಲಿ ಮೇ 27ರಂದು ನಿತ್ಯಾ ಆರ್ಟ್ಸ್ ಸೆಂಟರ್ ಆಯೋಜಿತ ಹಾಗೂ CGI ಮತ್ತು ಮೊಟ್ಟ ಮೊದಲ ಬಾರಿಗೆ ಮ್ಯೂನಿಕ್ ನ ಸಾಂಕೃತಿಕ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸತತ 2ನೇ ವರ್ಷದ ನಾಟ್ಯ ಫೆಸ್ಟ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಪ್ರಸಿದ್ದ ನಾಟ್ಯ ರಾಣಿ ಶಾಂತಲಾ ಪ್ರಶಸ್ತಿ ಹಾಗೂ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಡಾ.ವಸುಂಧರಾ ದೊರಸ್ವಾಮಿ ಮತ್ತು ಸತ್ಯ ಹೇಮರಾಜನಿ ಅವರು ನಾಟ್ಯ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
