ಉದಯವಾಹಿನಿ , ಲಂಡನ್: ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ (IND vs ENG) ನಾಲ್ಕನೇ ದಿನ ಮೊಹಮ್ಮದ್ ಸಿರಾಜ್ (Mohammed Siraj), ಬೆನ್ ಡಕೆಟ್ (Ben Ducket) ಅವರನ್ನು ಔಟ್ ಮಾಡುವ ಮೂಲಕ ಸಂಚಲನ ಮೂಡಿಸಿದರು. ದ್ವಿತೀಯ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಸಿರಾಜ್ ಎಸೆತದಲ್ಲಿ ಬೆನ್ ಡಕೆಟ್ ಮಿಡ್-ಆನ್ ಕಡೆಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಆದರೆ ಜಸ್‌ಪ್ರೀತ್‌ ಬುಮ್ರಾ ಚುರುಕಿನ ಕ್ಯಾಚ್‌ ಪಡೆಯುವ ಮೂಲಕ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ಬೆನ್ ಡಕೆಟ್ ಅವರ ಕ್ಯಾಚ್ ಅನ್ನು ಪಡೆದ ತಕ್ಷಣ ಸಿರಾಜ್ ಸಂಭ್ರಮಿಸಿದರು. ಅಲ್ಲದೆ ಸಂಭ್ರಮದ ವೇಳೆ ಅವರು ಬೆನ್‌ ಡಕೆಟ್‌ಗೆ ಭುಜಕ್ಕೆ ಡಿಕ್ಕಿ ಹೊಡೆರು ತಿರುಗೇಟು ನೀಡಿದರು.

ಇಂಗ್ಲೆಂಡ್‌ ತಂಡದ ಮೊದಲನೇ ವಿಕೆಟ್‌ನೊಂದಿಗೆ ಮೊಹಮ್ಮದ್ ಸಿರಾಜ್ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸಂಭ್ರಮಿಸುತ್ತಿರುವಾಗ ಅವರ ಭುಜ ಬೆನ್ ಡಕೆಟ್‌ಗೆ ಡಿಕ್ಕಿ ಹೊಡೆದರು. ಈ ವೇಳೆ ಅಂಪೈರ್ ಭಾರತೀಯ ಬೌಲರ್‌ಗೆ ಎಚ್ಚರಿಕೆ ನೀಡಿದರು. ಆದರೆ ಸಿರಾಜ್ ಅವರ ಈ ಪ್ರತಿಕ್ರಿಯೆಯಿಂದ ಲಾರ್ಡ್ಸ್ ಟೆಸ್ಟ್‌ನಲ್ಲಿ ಎರಡೂ ತಂಡಗಳ ನಡುವೆ ಈಗ ವಿಭಿನ್ನ ರೀತಿಯ ಉತ್ಸಾಹ ಕಾಣಲಿದೆ ಎಂಬುದು ಸ್ಪಷ್ಟವಾಯಿತು. ಇದು ಆಟದ ಮೂರನೇ ದಿನದ ಅಂತ್ಯದ ಸಮಯದಲ್ಲಿ ಪ್ರಾರಂಭವಾಯಿತು. ಏಕೆಂದರೆ ಝ್ಯಾಕ್‌ ಕ್ರಾವ್ಲಿ ಅವರು ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ನಲ್ಲಿ ಉದ್ದೇಶ ಪೂರ್ವಕವಾಗಿ ತಡ ಮಾಡುತ್ತಿದ್ದರು. ಈ ವೇಳೆ ಸಿರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!