ಉದಯವಾಹಿನಿ , ಲಂಡನ್‌: ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೂರನೇ ಟೆಸ್ಟ್‌ ಪಂದ್ಯ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಇಂಗ್ಲೆಂಡ್‌ ನೀಡಿದ್ದ 193 ರನ್‌ಗಳ ಗುರಿಯನು ಹಿಂಬಾಲಿಸಿದ ಭಾರತ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 58 ರನ್‌ ಗಳಿಸಿದೆ. ಇದೀಗ ಐದನೇ ದಿನವಾದ ಸೋಮವಾರ ಭಾರತ ತಂಡಕ್ಕೆ ಗೆಲ್ಲಲು ಇನ್ನೂ 135 ರನ್‌ಗಳ ಅಗತ್ಯವಿದೆ. ಇನ್ನು ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು 6 ವಿಕೆಟ್‌ಗಳ ಅಗತ್ಯವಿದೆ. ಇದರ ನಡುವೆ ಇಂಗ್ಲೆಂಡ್‌ ಸಹಾಯಕ ಕೋಚ್‌ ಮಾರ್ಕಸ್‌ ಟ್ರೆಸ್ಕೋಥಿಕ್‌ ಪ್ರವಾಸಿ ಟೀಮ್‌ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಇಂಗ್ಲೆಂಡ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 192 ರನ್‌ ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ ಬಹುಬೇಗ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮೊದಲಿಗೆ ಯಶಸ್ವಿ ಜೈಸ್ವಾಲ್‌ ಅವರನ್ನು ಜೋಫ್ರಾ ಆರ್ಚರ್‌ ಔಟ್‌ ಮಾಡಿದ್ದರು. ನಂತರ ಮಾರಕ ಬೌಲಿಂಗ್‌ ನಡೆಸಿದ್ದ ಬ್ರೈಡೆನ್‌ ಕಾರ್ಸ್‌, ಕರುಣ್‌ ನಾಯರ್‌ ಹಾಗೂ ಶುಭಮನ್‌ ಗಿಲ್‌ ಅವರನ್ನು ಔಟ್‌ ಮಾಡಿದ್ದರು. ನಂತರ ಕೊನೆಯ ಹಂತದಲ್ಲಿ ನಾಯಕ ಬೆನ್‌ ಸ್ಟೋಕ್ಸ್‌, ನೈಟ್‌‌ ವಾಚ್‌ಮನ್ ಆಗಿ ಬಂದಿದ್ದ ಆಕಾಶ್‌ ದೀಪ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ಇದೀಗ ಐದನೇ ಭಾರತ ತಂಡಕ್ಕೆ ಇನ್ನು 6 ವಿಕೆಟ್‌ಗಳು ಬಾಕಿ ಇವೆ.

Leave a Reply

Your email address will not be published. Required fields are marked *

error: Content is protected !!