ಉದಯವಾಹಿನಿ, ಲಂಡನ್‌ : ಸೌತೆಂಡ್‌ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್‌ ಆದ ಸ್ವಲ್ಪ ಸಮಯದ ನಂತರ ಸಣ್ಣ ವಿಮಾನ ಅಪಘಾತಕ್ಕೀಡಾಗಿದೆ,ಸದ್ಯಯಾವುದೇ ಸಾವುನೋವುಗಳ ಬಗ್ಗೆ ಯಾವುದೇ ಮಾಹಿತಿ ತಕ್ಷಣ ಲಭ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ನೆದರ್ಲ್ಯಾಂಡ್‌್ಸನಲ್ಲಿ ಜ್ಯೂಶ್‌ ಏವಿಯೇಷನ್‌ ನಿರ್ವಹಿಸುವ ವಿಮಾನವು ಗ್ರೀಸ್‌‍ನ ಅಥೆನ್‌್ಸನಿಂದ ಕ್ರೊಯೇಷಿಯಾದ ಪುಲಾಗೆ ತೆರಳಿ ನಂತರ ಸೌತೆಂಡ್‌ಗೆ ಬಂದಿದೆ.ಮತ್ತೆ ನೆದರ್ಲ್ಯಾಂಡ್‌್ಸನ ಲೆಲಿಸ್ಟಾಡ್‌ಗೆ ಹಿಂತಿರುಗಾವ ದಂರತ ಸಂಭವಿಸಿದೆ. ಜ್ಯೂಶ್‌ ಏವಿಯೇಷನ್‌ ತನ್ನ 1 ವಿಮಾನ ಅಪಘಾತದಲ್ಲಿ ಸಿಲುಕಿದೆ ಎಂದು ದೃಢಪಡಿಸಿದೆ ಮತ್ತು ಕಂಪನಿಯು ತನಿಖೆಗೆ ಸಹಕರಿಸಲಾಗುವುದು ಎಂದು ಹೇಳಿದೆ. ಬ್ರಿಟಿಷ್‌ ಮಾಧ್ಯಮದ ಪ್ರಕಾರ ಅಪಘಾತಗೊಂಡ ವಿಮಾನದಲ್ಲಿ ರೋಗಿಗಳನ್ನು ಸಾಗಿಸಲು ವೈದ್ಯಕೀಯ ವ್ಯವಸ್ಥೆಗಳನ್ನು ಹೊಂದಿರುವ ಬೀಚ್‌ಕ್ರಾಫ್ಟ್‌‍ -200 ಸೂಪರ್‌ ಕಿಂಗ್‌ ಏರ್‌ ಎಂದು ಹೇಳಿದೆ. ಇದು 39 ಅಡಿ ಉದ್ದದ ಟರ್ಬೊಪ್ರೊಪ್‌ ವಿಮಾನವಾಗಿದೆ.

ಲಂಡನ್‌ ಸೌತೆಂಡ್‌ ಸಣ್ಣ ವಿಮಾನ ನಿಲ್ದಾಣವಾಗಿದ್ದು, ರಾಜಧಾನಿಯಿಂದ ಪೂರ್ವಕ್ಕೆ ಸುಮಾರು 45 ಮೈಲುಗಳು ದೂರದಲ್ಲಿದೆ. ಮುಂದಿನ ಸೂಚನೆ ಬರುವವರೆಗೂ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಯಿತು, ಪೊಲೀಸರು, ತುರ್ತು ಸೇವೆಗಳು ಮತ್ತು ವಾಯು ತನಿಖಾಧಿಕಾರಿಗಳು ಸ್ಥಳದಲ್ಲಿದ್ದಾರೆ. ಅಪಘಾತದ ಸ್ಥಳದಿಂದ ಬೆಂಕಿ ಜ್ವಾಲೆ ಮತ್ತು ಕಪ್ಪು ಹೊಗೆ ಹೊರಹೊಮುತ್ತಿರುವುದನ್ನು ತೋರಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.ವಿಮಾನವು ತಲೆಕೆಳಗಾಗಿ ನೆಲಕ್ಕೆ ಅಪ್ಪಳಿಸಿದ ನಂತರ ದೊಡ್ಡ ಬೆಂಕಿಯ ಉಂಡೆಯಂತೆ ಕಂಡಿತು ಎಂದು ವಿಮಾನ ನಿಲ್ದಾಣದಲ್ಲಿದ್ದ ಪ್ರತ್ಯಕ್ಷದರ್ಶಿ ಜಾನ್‌ ಜಾನ್ಸನ್‌ ಹೇಳಿದರು.

Leave a Reply

Your email address will not be published. Required fields are marked *

error: Content is protected !!