ಉದಯವಾಹಿನಿ, ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ನೂತನ ಕೋಚ್‌ ಅನ್ನು ನೇಮಿಸುವ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ತಯಾರಿಯನ್ನು ಆರಂಭಿಸಿದೆ. ಹತ್ತೊಂಬತ್ತನೆ ಆವೃತ್ತಿಯ ಟೂರ್ನಿಯ ನಿಮಿತ್ತ ಹೈದರಾಬಾದ್‌ ಫ್ರಾಂಚೈಸಿ ನೂತನ ಬೌಲಿಂಗ್‌ ಕೋಚ್‌ ಆಗಿ ವರುಣ್‌ ಆರೋನ್‌ ಅವರನ್ನು ನೇಮಿಸಿದೆ. ಭಾರತದ ಪರ ಅತ್ಯಂತ ವೇಗದ ಎಸೆತವನ್ನು ಹಾಕಿರುವ ವರುನ್‌ ಆರೋನ್‌ ಇದೇ ಮೊದಲ ಬೇರೆ ವಿಶ್ವದ ಅತ್ಯಂತ ಫ್ರಾಚೈಸಿ ಲೀಗ್‌ನಲ್ಲಿ ಮೊದಲ ಬಾರಿ ಕೋಚಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
2025ರ ಜನವರಿಯಲ್ಲಿ ವರುಣ್‌ ಆರೋನ್‌ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇವರು ಭಾರತ ತಂಡದ ಪರ 9 ಟೆಸ್ಟ್‌ ಪಂದ್ಯಗಳು, ಹಾಗೂ ಹಲವು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ವರುಣ್‌ ಆರೋನ್‌ ಕಾಮೆಂಟರಿ ವೃತ್ತಿ ಬದುಕನ್ನು ಆರಂಭಿಸಿದ್ದರು. ಇದೀಗ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಟೆಸ್ಟ್‌ ಸರಣಿಯಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ.
ವರುಣ್‌ ಆರೋನ್‌ ಅವರು 2011 ರಲ್ಲಿ ತವರು ಇಂಗ್ಲೆಂಡ್ ಸರಣಿಯ ಸಮಯದಲ್ಲಿ ತಮ್ಮ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಂದು ತಿಂಗಳ ನಂತರ ಅವರು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು. 2015 ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರ ಕೊನೆಯ ಏಕದಿನ ಪಂದ್ಯ 2014 ರಲ್ಲಿ ಶ್ರೀಲಂಕಾ ವಿರುದ್ಧವಾಗಿತ್ತು.
ಆರೋನ್‌ ಐಪಿಎಲ್ ಟೂರ್ನಿಯಲ್ಲಿಯೂ ಒಮ್ಮೆ ಚಾಂಪಿಯನ್‌ ಆಗಿದ್ದರು. ಅವರು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ (ಜಿಟಿ) ತಂಡದ ಭಾಗವಾಗಿದ್ದರು. ಅದು ಅವರ ಚೊಚ್ಚಲ ಋತುವಿನಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಜಿಟಿ ಜೊತೆಗೆ, ಆರೋನ್ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪರವೂ ಆಡಿದ್ದರು.

Leave a Reply

Your email address will not be published. Required fields are marked *

error: Content is protected !!