ಉದಯವಾಹಿನಿ, ಕಲಬುರ್ಗಿ: ಮಾದಕದ್ರವ್ಯ ಸಾಗಾಣೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡ, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ (Lingaraj Kanni) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಅಲ್ಲಿನ ಕಲ್ಯಾಣ ಠಾಣೆ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಾರೆ.
ಬಂಧಿತರ ಬಳಿ ನಿಷೇಧಿತ 120 ಕೊಡೆನೈನ್ ಸಿರಪ್ ಬಾಟಲ್ ಇತ್ತು ಎನ್ನಲಾಗಿದೆ. ಎನ್​ಡಿಪಿಎಸ್ ಕಾಯ್ದೆ ಅಡಿ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಲಿಂಗರಾಜ್ ಕಣ್ಣಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.ಪ್ರತ್ಯೇಕ ಘಟನೆಯಲ್ಲಿ, ಇತ್ತೀಚೆಗೆ ತಮ್ಮ ಫ್ಲಾಟ್​ನಲ್ಲಿಯೇ ಪ್ರಯೋಗಾಲಯ ನಿರ್ಮಾಣ ಮಾಡಿ ಮೆಫೆಡ್ರೋನ್​ ಎಂಡಿ ಡ್ರಗ್ಸ್​ ತಯಾರಿಸುತ್ತಿದ್ದ ಇಬ್ಬರು ವಿಜ್ಞಾನ ಶಿಕ್ಷಕರನ್ನು ಎನ್​ಸಿಬಿ ಬಂಧಿಸಿದೆ. ಈ ಇಬ್ಬರು ಕಳೆದೆರಡು ತಿಂಗಳಲ್ಲಿ ಸುಮಾರು 12 ಕೋಟಿ ಡ್ರಗ್ಸ್​ ಮಾರಾಟ ಮಾಡಿದ್ದಾರೆ. ಬಂಧಿತರಿಂದ 780 ಗ್ರಾಂ ಎಂಡಿ ಡ್ರಗ್ಸ್​ ಹಾಗೂ ವಿವಿಧ ರಾಸಾಯನಿಕ ಮತ್ತು ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತರಲ್ಲಿ ಓರ್ವ ಶಿಕ್ಷಕ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊರ್ವ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಗರ ಮುಖ್ಯಭಾಗದಲ್ಲಿರುವ ಫ್ಲಾಟ್​ನಲ್ಲೇ ಇವರು ಡ್ರಗ್ಸ್​ ತಯಾರಿಸುತ್ತಿದ್ದರು. ಈ ಕುರಿತು ಯಾರಿಗೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಇಬ್ಬರು ಸುಮಾರು 5 ಕೆಜಿ ಡ್ರಗ್ಸ್​ ತಯಾರಿಸಿದ್ದು, ಇದರ ಮೌಲ್ಯ 15 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ 12 ಕೋಟಿಯ ಡ್ರಗ್ಸ್​ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!