ಉದಯವಾಹಿನಿ, ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಫೈಟ್ ಮಾಡದೇ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಕೇಂದ್ರದ ವಿರುದ್ಧ ಸಚಿವ ಮಹದೇವಪ್ಪ ವಾಗ್ದಾಳಿ ನಡೆಸಿದರು. ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ ಹಿನ್ನೆಲೆ ಪ್ರಧಾನಿ ಮೋದಿಗೆ ಸಿಎಂ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡಬೇಕು. ಸಿಗಂದೂರು ಸೇತುವೆ ಮಾಡಿರುವುದು ಐತಿಹಾಸಿಕ ಕೆಲಸ. ಇದನ್ನು ಸ್ವಾಗತ ಮಾಡಬೇಕು. 2013-18ವರೆಗೆ ನಾನು ಲೋಕೋಪಯೋಗಿ ಇಲಾಖೆಯ ಸಚಿವನಾಗಿದ್ದೆ.
ಆಗ ಯಡಿಯೂರಪ್ಪ ನನಗೆ ಸೇತುವೆ ಮಾಡಿಕೊಡಿ ಅಂತ ಕೇಳಿದ್ದರು. ಕಾಗೋಡು ತಿಮ್ಮಪ್ಪ ಕೂಡ ಮನವಿ ಮಾಡಿದ್ದರು. 2013-18ರ ನಡುವೆ ಕರ್ನಾಟಕ ರೋಡ್ ಡೆವಲಪ್ಮೆಂಟ್ ಕಾರ್ಪೋರೇಷನ್‌ನಿಂದ ಡಿಪಿಆರ್‌ನ್ನು (ಯೋಜನೆಯ ವಿವರವಾದ ವರದಿ) ತಯಾರಿ ಮಾಡಿದ್ದೆವು. ಬಳಿಕ ಗಡ್ಕರಿ ಅವರನ್ನು ಭೇಟಿ ಮಾಡಿ, ನ್ಯಾಷನಲ್ ಹೈವೆ ಅಥವಾ ಸಾಗರಮಾಲ ಯೋಜನೆ ಮಾಡಿ ಕೊಡಿ ಎಂದು ಕೇಳಿದ್ದೆ ಎಂದು ಇತಿಹಾಸ ತಿಳಿಸಿದರು.
