ಉದಯವಾಹಿನಿ, ಬಳ್ಳಾರಿ: ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು (Sandur) ತಾಲೂಕಿನ ಕಾಳಿಂಗೇರಿಯಲ್ಲಿ ನಡೆದಿದೆ. ಕಾಳಂಗೇರಿಯ ದೀಕ್ಷಾ (12) ಮೃತ ಬಾಲಕಿ. 6ನೇ ತರಗತಿಯಲ್ಲಿ ಓದುತ್ತಿದ್ದ ದೀಕ್ಷಾ ಎಂದಿನಂತೆ ಸಿದ್ಧಳಾಗಿ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ತೆರಳುವಾಗ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕಿ ದೀಕ್ಷಾಳನ್ನ ಕೂಡಲೇ ಕುಟುಂಬಸ್ಥರು ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ದೀಕ್ಷಾ ಮೃತಪಟ್ಟಿದ್ದಾಳೆ.
ದೀಕ್ಷಾ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ನೂ ಹೃದಯಾಘಾತದಿಂದ 35 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದಲ್ಲಿ ನಡೆದಿದೆ. 35 ವರ್ಷದ ರಾಜೇಶ್ ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ. ರಾಜೇಶ್ ಸೋಮವಾರ ಸಂಜೆ ತಾರಾನಗರ ಗ್ರಾಮದ ಮನೆಲ್ಲಿರುವಾಗ ಎದೆ ನೋವು ಕಾಣಿಸಿಕೊಂಡಿದೆ.
