ಉದಯವಾಹಿನಿ, ಇಲಿಗಳು ತುಂಬಾ ಚಾಣಕ್ಷ ಪ್ರಾಣಿ. ಹಾವು, ಬೆಕ್ಕಿಗೆಲ್ಲ ಆಹಾರವಾಗಿರುವ ಈ ಇಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಬೇರೆ ಬೇರೆ ತಂತ್ರಗಳನ್ನು ಉಪಯೋಗಿಸುತ್ತಿರುತ್ತವೆ. ಇಲಿಗಳಲ್ಲಿರುವ ಈ ಜಾಣ್ಮೆಗೆ ಮೆಚ್ಚಲೇಬೇಕು ನೋಡಿ. ಇಲ್ಲೊಂದು ಇಂತಹದ್ದೇ ಇಲಿಯ ಚಾಣಾಕ್ಷತೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಇಲಿ ತನ್ನ ಜೀವ ಉಳಿಸಿಕೊಳ್ಳಲು ಹಾವಿನ ತಲೆಯ ಮೇಲೆಯೇ ಹೋಗಿ ಕೂತಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾವಿನ ಮುಂದೆ ಇಲಿಯೊಂದು ತನ್ನ ಜೀವವನ್ನು ಉಳಿಸಿಕೊಂಡದ್ದನ್ನು ನೋಡಿ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಒಂದು ಹಾವಿನ ಮುಂದೆ ಇಲಿ ಬಂದರೆ, ಹಾವಿಗೆ ಅದು ಅಂದಿನ ಆಹಾರವಾಗಿರುತ್ತದೆ. ಆದರೆ ಇಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಬೇರೆ ಬೇರೆ ರೀತಿಯ ಪ್ಲಾನ್ಗಳನ್ನು ಮಾಡುತ್ತದೆ, ಇಲ್ಲಿ ಕೂಡ ಇಲಿ ಮತ್ತು ಹಾವು ಮುಖಮುಖಿಯಾಗಿದೆ. ಈ ವೇಳೆ ಇಲಿ ತನ್ನ ಪ್ಲಾನ್ನ್ನು ಉಪಯೋಗಿಸಿದೆ.
ಈ ವಿಡಿಯೋದಲ್ಲಿ ಇಲಿ ನಾಗರ ಹಾವಿನ ತಲೆಯ ಮೇಲೆ ಕೂತಿರುವುದನ್ನು ಕಾಣಬಹುದು. ಹಾವು ಕಡೆ ಈ ಇಲಿಯನ್ನು ಹುಡುಕುತ್ತಿದೆ. ಆದರೆ ಹಾವಿಗೆ ಇಲಿ ಮಾತ್ರ ಸಿಗುತ್ತಿಲ್ಲ. ಇಲಿ ತನ್ನ ತಲೆ ಉಪಯೋಗಿಸಿಕೊಂಡ ಹಾವಿನ ತಲೆಯ ಮೇಲೆಯೇ ಹೋಗಿ ಕುಳಿತಿದ್ದರೆ, ಹಾವು ತನ್ನ ಆಹಾರ ಎಲ್ಲಿ ಹೋಗಿದೆ ಎಂದು ಹುಡುಕುತ್ತಿದೆ. ಇಲಿ ಕೂಡ ಒಂದು ಬಾರಿ ಕೆಳಗೆ ಹೋಗಿ, ಮತ್ತೆ ತಲೆಯ ಮೇಲೆ ಬರುತ್ತದೆ. ಇಲ್ಲಿ ಇಲಿಯೇ ಹಾವನ್ನು ಆಟವಾಡಿಸಿದ್ದು, ಹಾವು- ಇಲಿಯ ಈ ಆಟದಲ್ಲಿ ಹಾವು ಮಾತ್ರ ಸಿಕ್ಕಪಟ್ಟೆ ಸುಸ್ತಾಗಿದೆ.
