ಉದಯವಾಹಿನಿ, ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೆ ಈಗ 46 ವರ್ಷ ವಯಸ್ಸು. ಸಿನಿಮಾಗಳ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ತಮಗೆ ಒಪ್ಪುವಂತಹ ಪಾತ್ರಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುವಾಗ ಹೆಚ್ಚಾಗಿ ಅವರು ಸೀರೆ ಧರಿಸಿ ಕಾಣಿಸಿಕೊಳ್ಳುತ್ತಾರೆ. ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆದರೆ ಈಗ ಅವರು ಹೊಸ ಫೋಟೋಶೂಟ್ನಲ್ಲಿ ಬೋಲ್ಡ್ ಅವತಾರ ತಾಳಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಪ್ರತಿಷ್ಠಿತ ‘ದಿ ಪಿಕಾಕ್ ಮ್ಯಾಗಜಿನ್’ ಮುಖಪುಟಕ್ಕಾಗಿ ವಿದ್ಯಾ ಬಾಲನ್ ಅವರು ಈ ರೀತಿ ಪೋಸ್ ನೀಡಿದ್ದಾರೆ. ಎರಡು ಕಾಸ್ಟ್ಯೂಮ್ಗಳನ್ನು ಧರಿಸಿ ಅವರು ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಗೌನ್ನಲ್ಲಿ ವಿದ್ಯಾ ಬಾಲನ್ ತುಂಬ ಗ್ಲಾಮರಸ್ ಆಗಿ ಕಣ್ಣು ಕುಕ್ಕಿದ್ದಾರೆ. ಅವರ ಅಭಿಮಾನಿಗಳು ಈ ಫೋಟೋಗಳನ್ನು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಟೀಕೆ ಮಾಡುತ್ತಿದ್ದಾರೆ.ಇದು ವಿದ್ಯಾ ಬಾಲನ್ ಅಂತ ನಂಬಲು ಸಾಧ್ಯವೇ ಆಗಲಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ನೆಪೋ ಕಿಡ್ಗಳು ವಿದ್ಯಾ ಬಾಲನ್ ಅವರನ್ನು ನೋಡಿ ಫ್ಯಾಷನ್ ಬಗ್ಗೆ ಕಲಿಯಬೇಕು’ ಎಂದು ಕೂಡ ವಿದ್ಯಾ ಬಾಲನ್ ಫ್ಯಾನ್ಸ್ ಹೊಗಳಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ಮೂಲಕ ವಿದ್ಯಾ ಬಾಲನ್ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.
