ಉದಯವಾಹಿನಿ, ಐಕಾನ್‍ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ ಪಾರ್ಟ್-1 ಹಾಗೂ ಪುಷ್ಪಾ-2 ಸಿನಿಮಾಗಳ ಗ್ರೇಟ್ ಸಕ್ಸಸ್‍ನ ನಂತರ ಜವಾನ್ ಚಿತ್ರ ನಿರ್ದೇಶಕ ಅಟ್ಲೀ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ. ಸೂಪರ್‍ಮ್ಯಾನ್ ಕಾನ್ಸೆಪ್ಟ್‍ನಲ್ಲಿ ರೆಡಿಯಾಗಲಿರುವ ಎಎ26/ಅ6 ಚಿತ್ರದಲ್ಲಿ ಅತಿದೊಡ್ಡ ತಾರಾಗಣವೇ ಇದೆ. ಇದೀಗ ತಮ್ಮ ಅಭಿಮಾನಿಗಳಿಗೆ ಸಪ್ರ್ರೈಸ್ ಮುಮೆಂಟ್ ಎನ್ನುವಂತೆ ಯುನಿವರ್ಸಲ್ ಸ್ಟುಡಿಯೋದಲ್ಲಿ ತಮ್ಮ ಫ್ಯಾಮಿಲಿ ಜೊತೆ ಸುಂದರ ಕ್ಷಣಗಳನ್ನ ಕಳೆಯುತ್ತಿದ್ದಾರೆ ಅಲ್ಲು ಅರ್ಜುನ್.ಪತ್ನಿ ಹಾಗೂ ಮಕ್ಕಳ ಜೊತೆ ಅಲ್ಲು ಅರ್ಜುನ್ ಹಾಲಿವುಡ್‍ನ ಯುನಿವರ್ಸಲ್ ಸ್ಟುಡಿಯೋದಲ್ಲಿ ಸುತ್ತಾಟ ನಡೆಸಿದ್ದಾರೆ. ಅಲ್ಲಿ ಕಳೆದ ಬ್ಯೂಟಿಫುಲ್ ಮುಮೆಂಟ್ಸ್‍ನ ಕ್ಯಾಪ್ಚರ್ ಮಾಡಿದ ಪತ್ನಿ ಸ್ನೇಹಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಪೋಸ್ಟ್ ನೋಡಿ ಅಲ್ಲು ಅರ್ಜುನ್ ಫ್ಯಾನ್ಸ್ ಪ್ರೀತಿಯಿಂದ ಶುಭ ಕೋರುತ್ತಿದ್ದಾರೆ.
ಅಲ್ಲು ಅರ್ಜುನ್ ಹಾಗೂ ಅಟ್ಲೀ ಸಿನಿಮಾದ ತಯಾರಿಯ ನಡುವೆ ಕುಟುಂಬಕ್ಕೂ ಟೈಂ ಕೊಟ್ಟ ಫ್ಯಾಮಿಲಿ ಮ್ಯಾನ್ ಐಕಾನ್‍ಸ್ಟಾರ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಅಟ್ಲೀ ಜೊತೆಗಿನ ಬಹುಕೋಟಿ ಬಜೆಟ್‍ನಲ್ಲಿ ತಯಾರಾಗಲಿರುವ ಸಿನಿಮಾದ ಬಗ್ಗೆ ಸದ್ಯದಲ್ಲಿಯೇ ಬಿಗ್ ಅಪ್‍ಡೇಟ್ ಕೂಡಾ ಸಿಗಲಿದೆ. ಇನ್ನು ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದ್ದು ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದೆ.
