ಉದಯವಾಹಿನಿ, ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆನೆ ಮಾನವನ ಸಂಘರ್ಷಕ್ಕೆ ಮೀತಿಯೇ ಇಲ್ಲದಂತೆ ಆಗಿದೆ. ಆನೆಗಳ ಚಲನವಲನದ ಬಗ್ಗೆ ಎಚ್ಚರಿಕೆ ನೀಡಲು ಎಐ ಆಧಾರಿತ ಸೈರನ್ ವ್ಯವಸ್ಥೆ ರೂಪಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ದಿನ ಬೆಳಗಾದ್ರೆ ಸಾಕು ವನ್ಯಜೀವಿ ಕಾಡಾನೆಗಳ ಉಪಟಳ ಹೆಚ್ಚಾಗಿರುತ್ತದೆ. ಹೀಗಾಗಿ ವನ್ಯಜೀವಿಗಳ ಸಂಚಾರಕ್ಕೆ ಸಂಬಂಧಿಸಿದ ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಕೊಡಗಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಹೊಸ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ಕ್ರಮಕ್ಕೆ ಖಾಸಗಿ ಕಂಪನಿಯೊಂದು ಹಣಕಾಸು ಒದಗಿಸಿದ್ದು, ಸರ್ಕಾರೇತರ ಸಂಸ್ಥೆಯಿಂದ ಸೈರನ್ ವ್ಯವಸ್ಥೆ ಅಳವಡಿಸಲಾಗಿದೆ. ಕೊಡಗಿನ ವಿರಾಜಪೇಟೆಯಾದ್ಯಂತ ವನ್ಯಜೀವಿಗಳ ಚಲನೆಯ ಬಗ್ಗೆ ನಿವಾಸಿಗಳಿಗೆ ಎಚ್ಚರಿಕೆ ನೀಡಲು ಸೈರನ್ ವ್ಯವಸ್ಥೆಯನ್ನ ಸ್ನೇಹ ಸಂಸ್ಥೆ ಪ್ರಾಯೋಗಿಕವಾಗಿ ಆರಂಭಿಸಿದೆ.

ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ಬಡಗ, ಬನಂಗಾಲ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಂಘರ್ಷ ವಲಯಗಳಲ್ಲಿ 12 ಅಂತಹ ಸೈರನ್‌ಗಳನ್ನ ಸ್ಥಾಪಿಸುವ ಎನ್‌ಜಿಓ ಕೆಲಸ ಮಾಡಿದೆ. ಈ ಯೋಜನೆ ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದರೂ, ಸ್ವಯಂಚಾಲಿತ ಎಚ್ಚರಿಕೆ ವ್ಯವಸ್ಥೆಗಳನ್ನ ಪರಿಚಯಿಸುವ ಮೂಲಕ ಸ್ನೇಹ ಸಂಸ್ಥೆ ಕೆಲಸ ಮಾಡ್ತಿದೆ.

Leave a Reply

Your email address will not be published. Required fields are marked *

error: Content is protected !!