ಉದಯವಾಹಿನಿ, ತಮ್ಮ ಅದ್ಭುತವಾದ ಅಭಿನಯದಿಂದಲೇ ಫಿಲ್ಮ್ ಫೇರ್ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾದ ನಟ ರಾಜ್ ಕುಮಾರ್ ರಾವ್ ಅವರು ಇತ್ತೀಚೆಗೆ ಸಿನಿಮಾ ಹೊರತಾಗಿ ವೈಯಕ್ತಿಕ ಜೀವನದ ವಿಚಾರದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಕ್ವೀನ್ , ಅಲಿಗಢ, ಬರೇಲಿ ಕೀ ಬರ್ಫಿ, ಟ್ರ್ಯಾಪ್ಡ್, ನ್ಯೂಟನ್ ಇತರ ಸಿನಿಮಾಗಳಿಂದ ಜನಮನಗೆದ್ದ ನಟ ರಾಜ್ ಕುಮಾರ್ ರಾವ್ ಅವರು ತಂದೆ ಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ವೈರಲ್ ಆಗಿತ್ತು.
ರಾಜ್ ಕುಮಾರ್ ರಾವ್ ಅವರ ಸಿನಿ ಕೆರಿಯರ್ ನಲ್ಲಿ ಕ್ವೀನ್ ಮತ್ತು ಸ್ತ್ರೀ ಸಿನಿಮಾ ಬಿಗ್ ಸಕ್ಸಸ್ ಅನ್ನು ನೀಡಿತ್ತು. ಇದಾಗಿ ಕೆಲವು ಹೊಸ ಸಿನಿಮಾಕ್ಕೂ ಕೂಡ ನಟ ರಾಜ್ ಸಹಿ ಕೂಡ ಹಾಕಿದ್ದರು. ಇಷ್ಟೆಲ್ಲ ಬ್ಯುಸಿ ಶೆಡ್ಯುಲ್ ನಡುವೆಯೂ ತಮ್ಮ ಪತ್ನಿ ಪತ್ರಲೇಖ ಜೊತೆಗೆ ನ್ಯೂಜಿಲ್ಯಾಂಡ್ ಪ್ರವಾಸಕ್ಕೆಂದು ತೆರಳಿದ್ದು ಅಲ್ಲಿ ಬೇಬಿ ಮೂನ್ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆನಟ ರಾಜ್ ಕುಮಾರ್ ರಾವ್ ಅವರ ಪತ್ನಿ ಪತ್ರಲೇಖಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನ್ಯೂಜಿ ಲೆಂಡ್‌ನಲ್ಲಿ ಬೇಬಿ ಮೂನ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಾಜ್ ಕುಮಾರ್ ಮತ್ತು ಪತ್ರಲೇಖಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಕೈ ಹಿಡಿದಿರುವುದನ್ನು ಸೆರೆ ಹಿಡಿಯಲಾಗಿದೆ. ಇವರ ಒಂದೊಂದು ಫೋಟೊ ಕೂಡ ಅದ್ಬುತವಾಗಿ ಮೂಡಿ ಬಂದಿದೆ.ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟ ರಾಜ್ ಕುಮಾರ್ ಮತ್ತು ಪತ್ರಲೇಖ ಅವರು ಕಿಸ್ ಮಾಡುತ್ತಿರುವ ಫೋಟೊ ಕೂಡ ವೈರಲ್ ಆಗಿದೆ.
