ಉದಯವಾಹಿನಿ,  ಉತ್ತರಪ್ರದೇಶ : ಹಾವಿನ ದ್ವೇಷ 12 ವರುಷ ಎಂಬುದನ್ನು ನೀವು ಕೇಳಿರುತ್ತೀರಿ. ಆದರೆ ನಮ್ಮ ಗಮನಕ್ಕೆ ಬರುವವರೆಗೂ ಇದು ಸುಳ್ಳಿರಬಹುದು ಎಂದೇ ಎನಿಸುತ್ತಿರುತ್ತದೆ. ಆದರೆ ಸತ್ಯ ಕಣ್ಣೆದುರೇ ಇದ್ದಾಗ ನಂಬಲೇಬೇಕಾಗುತ್ತದೆ. ಆದರೆ ತನ್ನ ಸಂಗಾತಿಯನ್ನು ಕೊಂದ ಮನೆಗೆ ನುಗ್ಗಿ ಹೆಣ್ಣು ಹಾವೊಂದು ಪ್ರತೀಕಾರ ತೀರಿಸಿಕೊಂಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ. ಸಿಹೋರಾ ಗ್ರಾಮದ ನಿವಾಸಿ ಮನೋಜ್ ಅವರ ಪತ್ನಿ ಕಳೆದ ತಿಂಗಳಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಜುಲೈ 2ರಂದು ನಾಮಕರಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮಕ್ಕೆ ಸಂಬಂಧಿಕರೆಲ್ಲಾ ಮನೆಗೆ ಬಂದಿದ್ದರು. ಹಾಗೆಯೇ ಮನೋಜ್ ಅವರ ಪತ್ನಿಯ ಸಹೋದರ ಸಚಿನ್ ಕೂಡ ಅಲ್ಲಿಗೆ ಬಂದಿದ್ದರು. ಮನೆಯ ಒಳಗೆ ಕೋಣೆಯಲ್ಲಿ ಹಾವು ಇರುವುದನ್ನು ಕಂಡು ಬೆಚ್ಚಿಬಿದ್ದ ಸಚಿನ್ ಕೂಡಲೇ ದೊಣ್ಣೆಯಿಂದ ಗಂಡು ಹಾವನ್ನು ಹೊಡೆದು ಸಾಯಿಸಿದ್ದಾರೆ. ಬಳಿಕ ಕೆಲವೇ ದಿನಗಳಲ್ಲಿ ಆ ಗಂಡು ಹಾವಿನ ಸಂಗಾತಿ ಮೂವರಿಗೆ ಕಚ್ಚಿ ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಮನೋಜ್ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಸ್ಥರು ಆ ಹೆಣ್ಣು ಹಾವನ್ನು ಹಿಡಿದು ಕೊಂದಿದ್ದಾರೆ. ಮರುದಿನ ಸಚಿನ್ ತನ್ನ ಗ್ರಾಮಕ್ಕೆ ಹಿಂದಿರುಗಿದ್ದ, ನಾಲ್ಕು ದಿನಗಳ ನಂತರ, ಮನೆಯೊಳಗೆ ಕಪ್ಪು ಬಣ್ಣದ ಹಾವು ಕಾಣಿಸಿಕೊಂಡಿತ್ತು. ಅದನ್ನು ನೋಡಿದಾಗ ಮನೆಯೊಳಗೆ ಗದ್ದಲ ಉಂಟಾಯಿತು. ಶಬ್ದದಿಂದಾಗಿ, ಹಾವು ಮನೆಯೊಳಗೆ ಅಡಗಿಕೊಂಡಿತ್ತು. ಮನೆಯ ಹೊರಗೆ ಓಡಾಡುತ್ತಿದ್ದ ಹಾವನ್ನು ಜನರು ನೋಡಿದ್ದರು ಆದರೆ ನಿರ್ಲಕ್ಷ್ಯಸಿದ್ದರು. ಮನೋಜ್ ತಮ್ಮ ಹೆಂಡತಿ ಹಾಗೂ ಮಗುವೊಂದಿಗೆ ಮಲಗಿದ್ದಾಗ ಬೆಳಗ್ಗೆ 4 ಗಂಟೆ ಸುಮಾರಿಗೆ ಮನೋಜ್​​ಗೆ ಹಾವು ಕಚ್ಚಿತ್ತು. ಹಾವು ನೋಡಿದ ತಕ್ಷಣ ಆಕೆ ಕಿರುಚಿದ್ದಾರೆ.ಕೂಡಲೇ ಮನೋಜ್​ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಲಾಯಿತು. ಆದರೆ ಸ್ವಲ್ಪ ಸಮಯದ ಬಳಿಕ ಆರೋಗ್ಯ ತುಂಬಾ ಹದಗೆಟ್ಟಿತ್ತು, ಎರಡೆರಡು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅವರು ಮೃತಪಟ್ಟಿದ್ದಾರೆ.ಮನೋಜ್ ಅವರ ತಮ್ಮ ದಿನೇಶ್ ಸೇರಿ ಮೂವರಿಗೆ ಹಾವು ಕಚ್ಚಿತ್ತು. ಅವರ ಸ್ಥಿತಿ ಸ್ಥಿರವಾಗಿದೆ. ಗ್ರಾಮಸ್ಥರು ಆ ಹೆಣ್ಣು ಹಾವನ್ನು ಹೊಡೆದು ಸಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!