ಉದಯವಾಹಿನಿ, ತಿರುಮಲ: ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ನಾಲ್ವರು ನೌಕರರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿಯಂತ್ರಿಸುವ ಅಧಿಕೃತ ಸಂಸ್ಥೆ ತಿರುಮಲ ತಿರುಪತಿ ದೇವಸ್ಥಾನಗಳು ಅಮಾನತುಗೊಳಿಸಿದೆ. ಸಂಸ್ಥೆಯ ನಾಲ್ವರು ನೌಕರರು ಹಿಂದೂಯೇತರ ನಂಬಿಕೆಗಳನ್ನು ಪಾಲಿಸುತ್ತಿದ್ದರು. ಇವರ ವಿರುದ್ದ ಟಿಟಿಡಿ ವಿಜಿಲೆನ್ಸ್ ಇಲಾಖೆ ಸಲ್ಲಿಸಿದ ವರದಿ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಿ ಅಮಾನತುಗೊಳಿಸಿರುವುದಾಗಿ ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಐಆರ್‌ಆರ್‌ಡಿ ಆಸ್ಪತ್ರೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಎಲಿಜರ್, ಸ್ಟಾಫ್ ನರ್ಸ್ ಬಿ. ಎಲಿಜರ್, ಬಿಐಆರ್‌ಆರ್‌ಡಿ ಆಸ್ಪತ್ರೆಯ ಗ್ರೇಡ್- 1 ಫಾರ್ಮಸಿಸ್ಟ್ ಎಸ್. ರೋಸಿ, ಎಸ್‌ವಿ ಆಯುರ್ವೇದ ಫಾರ್ಮಸಿಯ ಎಂ. ಪ್ರೇಮಾವತಿ ಮತ್ತು ಜಿ. ಅಸುಂತ ಅವರನ್ನು ತಿರುಮಲ ತಿರುಪತಿ ದೇವಸ್ಥಾನಗಳು ಅಮಾನತುಗೊಳಿಸಿದೆ.
ಬೇರೆ ಧರ್ಮದ ನಂಬಿಕೆಗಳನ್ನು ಪಾಲಿಸಿದ ಆರೋಪದ ಆಧಾರದ ಮೇಲೆ ನಾಲ್ವರು ನೌಕರರನ್ನು ಟಿಟಿಡಿ ಅಮಾನತುಗೊಳಿಸಿದ್ದು, ಇವರು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹಿಂದೂ ಧಾರ್ಮಿಕ ಸಂಘಟನೆಯನ್ನು ಪ್ರತಿನಿಧಿಸುವಾಗ ಮತ್ತು ಕೆಲಸ ಮಾಡುವಾಗ ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಹೇಳಿದೆ.ಈ ಕುರಿತು ಟಿಟಿಡಿ ವಿಜಿಲೆನ್ಸ್ ಇಲಾಖೆ ಸಲ್ಲಿಸಿದ ವರದಿ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಿರುವುದಾಗಿ ಟಿಟಿಡಿ ತಿಳಿಸಿದೆ.
