ಉದಯವಾಹಿನಿ, ನೂಹ್‌‍ : ಮಾದಕ ದ್ರವ್ಯಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬ ಹಣ ಕೊಡಲಿಲ್ಲ ಎಂದು ತನ್ನ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಕೇವಲ 20 ರೂಪಾಯಿಗಾಗಿ 56 ವರ್ಷದ ತಾಯಿಯನ್ನು ಮಗ ಹತ್ಯೆ ಮಾಡಿದ್ದಾನೆ. ಜೈಸಿಂಗ್‌ಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹೆತ್ತ ತಾಯಿಯನ್ನೇ ಕಡಿದು ಕೊಂದ ಪಾಪಿ ಮಗನನ್ನು ಜೆಮ್‌ಶೆಡ್‌ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮಗ ಮಾದಕ ವ್ಯಸನಿಯಾಗಿದ್ದು, ಬಹಳ ದಿನಗಳಿಂದ ಗಾಂಜಾ ಮತ್ತು ಅಫೀಮು ಸೇವಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.ಕೊಲೆ ಮಾಡಿದ ಬಳಿಕ ರಕ್ತ ಸಿಕ್ತ ಸ್ಥಿತಿಯಲ್ಲಿದ್ದ ತಾಯಿ ಜತೆಯೇ ಒಂದೇ ಮನೆಯಲ್ಲಿ ಆತ ಇಡೀ ರಾತ್ರಿ ಕಳೆದಿದ್ದಾನೆ. ಈತ ತನ್ನ ತಾಯಿ ರಜಿಯಾ ಬಳಿ 20 ರೂ. ಕೊಡುವಂತೆ ಕೇಳಿದ್ದ. ಆದರೆ ಅವರು ನಿರಾಕರಿಸಿದ್ದರು. ಅದಕ್ಕೆ ಕೋಪಗೊಂಡ ಮಗ ತಾಯಿಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ. ಎಫ್‌ಐಆರ್‌ ದಾಖಲಿಸಲಾಗಿದೆ, ಮರಣೋತ್ತರ ಪರೀಕ್ಷೆಯ ನಂತರ ರಜಿಯಾ ಅವರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ರಜಿಯಾ ಅವರ ಪತಿ ಮುಬಾರಕ್‌ ಕೇವಲ ನಾಲ್ಕು ತಿಂಗಳ ಹಿಂದೆ ನಿಧನರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!