ಉದಯವಾಹಿನಿ, ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು 3,500 ಕೋಟಿ ಮೌಲ್ಯದ ಅಕ್ರಮ ಮದ್ಯ ಹಗರಣದಲ್ಲಿ ಕಿಕ್‍ಬ್ಯಾಕ್‍ಗಳ ಫಲಾನುಭವಿ ಎಂದು ಆರೋಪಿಸಲಾಗಿದೆ. ಆಂಧ್ರಪ್ರದೇಶ ಸಿಐಡಿ ಪೋಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಆಂಧ್ರಪ್ರದೇಶದಲ್ಲಿ ನಡೆದ ಅಬಕಾರಿ ಹಗರಣ ಕುರಿತಂತೆ 305 ಪುಟಗಳ ದಾಖಲೆಯನ್ನು ಸಲ್ಲಿಸಿದೆ. ಆದಾಗ್ಯೂ ಜಗನ್‍ಮೋಹನ್ ರೆಡ್ಡಿ ಚಾರ್ಜ್‍ಶೀಟ್‍ನಲ್ಲಿ ಅವರನ್ನು ನೇರವಾಗಿ ಆರೋಪಿ ಎಂದು ಹೆಸರಿಸಿಲ್ಲ. ನ್ಯಾಯಾಲಯವು ಇನ್ನೂ ಚಾರ್ಜ್‍ಶೀಟ್ ಅನ್ನು ಪರಿಗಣಿಸಬೇಕಿದೆ.
2019-2024ರ ವೈಎಸ್‍ಆರ್ ಕಾಂಗ್ರೆಸ್ ಪಕ್ಷ (ವೈಎಸ್‍ಆರ್‍ಸಿಪಿ) ಆಡಳಿತದ ಅವ„ಯಲ್ಲಿ ಪ್ರತಿ ತಿಂಗಳು 50-60 ಕೋಟಿ ಅಕ್ರಮವಾಗಿ ಸಂಗ್ರಹಿಸಲಾಗುತ್ತಿತ್ತು ಎಂದು ಚಾರ್ಜ್‍ಶೀಟ್‍ನಲ್ಲಿ ಹೇಳಿದೆ. ಈ ಹಣವನ್ನು ಕೇಶಿರೆಡ್ಡಿ ರಾಜಶೇಖರ್ ರೆಡ್ಡಿ (ಎ-1) ಅವರಿಗೆ ಹಸ್ತಾಂತರಿಸಲಾಗುತ್ತಿತ್ತು. ನಂತರ ರಾಜಶೇಖರ್ ರೆಡ್ಡಿ ಈ ಹಣವನ್ನು ವಿಜಯ್‍ಸಾಯಿ ರೆಡ್ಡಿ (ಎ-5), ಮಿಥುನ್ ರೆಡ್ಡಿ (ಎ-4) ಮತ್ತು ಬಾಲಾಜಿ (ಎ-33) ಅವರ ಮೂಲಕ ಜಗನ್‍ಮೋಹನ್ ರೆಡ್ಡಿಗೆ ತಲುಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಚಾರ್ಜ್‍ಶೀಟ್ ಪ್ರಕಾರ, ರಾಜಶೇಖರ್ ರೆಡ್ಡಿ ಈ ಹಗರಣದ ಮಾಸ್ಟರ್‍ಮೈಂಡ್ ಮತ್ತು ಸಹ-ಪಿತೂರಿಗಾರ ಎಂದು ಹೇಳಲಾಗಿದೆ. ಅಬಕಾರಿ ನೀತಿಯನ್ನು ಬದಲಾಯಿಸುವುದು, ಸ್ವಯಂಚಾಲಿತ ಆರ್ಡರ್ -Áರ್ ಸಪ್ಪೆ (ಒಎ-ïಎಸ್) ವ್ಯವಸ್ಥೆಯನ್ನು ಹಸ್ತಚಾಲಿತ ಪ್ರಕ್ರಿಯೆಗಳೊಂದಿಗೆ ಬದಲಾಯಿಸುವುದು ಮತ್ತು ಎಪಿಎಸ್‍ಬಿಸಿಎಲ್ (ಆಂಧ್ರಪ್ರದೇಶ ರಾಜ್ಯ ಪಾನೀಯ ನಿಗಮ ನಿಯಮಿತ)ನಲ್ಲಿ ತಮ್ಮ ನಿಷ್ಠಾವಂತರನ್ನು ನೇಮಿಸುವುದರ ಮೂಲಕ ಅವರು ಈ ಅಕ್ರಮಗಳನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ.
