ಉದಯವಾಹಿನಿ, ನವದೆಹಲಿ : ಸಹೋದ್ಯೋಗಿಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾಪ್ರಿಯ ಅವರ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಸದ್ಯದಲ್ಲಿ ಯೆಮನ್ನಿನಿಂದ ಬಿಡುಗಡೆಯಾಗಿ ತಾನ್ನಾಡಿಗೆ ಅವರು ಮರಳಲಿದ್ದಾರೆ.ಯೆಮನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳ ಸತತ ಪ್ರಯತ್ನದ ಫಲವಾಗಿ, ಇನ್ನೇನು ನೇಣಿನ ಕುಣಿಕೆಗೆ ಕೊರಳೊಡ್ಡಬೇಕಿದ್ದ ನಿಮಿಷಾಪ್ರಿಯ ಅವರ ಮರಣದಂಡನೆಯನ್ನು ರದ್ದು ಮಾಡಲಾಗಿದೆ ಎಂದು ಸುವಾರ್ತ ಬೋಧಕ ಡಾ.ಕೆ.ಎ.ಪಾಲ್ ಅವರು ಯೆಮನ್ ದೇಶದ ಸನಾದಿಂದ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ನಿಮಿಷಾಪ್ರಿಯ ಅವರನ್ನು ಉಳಿಸಿಕೊಳ್ಳಲು ಅವರಿಗಾಗಿ ಕೊನೆ ಕ್ಷಣದವರೆಗೂ ಹೋರಾಟ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಹಾಗೂ ಯೆಮನ್ ಸರ್ಕಾರಕ್ಕೆ ಹೃತೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಕಳೆದ ಹತ್ತು ದಿನಗಳಿಂದ ಹಲವಾರು ನಾಯಕರು ಇದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.ನಿಮಿಷಾಪ್ರಿಯ ಮರಣದಂಡನೆ ರದ್ದಾಗಿದೆ. ಈ ದೊಡ್ಡ ಯಶಸ್ಸನ್ನು ಸಾಧಿಸಲು ಶ್ರಮಿಸಿದ ಎಲ್ಲ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ. ದೇವರ ದಯೆಯಿಂದ ಅವರನ್ನು ಭಾರತಕ್ಕೆ ಕರೆದೊಯ್ಯಲಾಗುವುದು. ರಾಜತಾಂತ್ರಿಕರನ್ನು ಕಳುಹಿಸಿದ್ದು, ಸುರಕ್ಷಿತವಾಗಿ ಕರೆತರಲು ತಯಾರಿ ನಡೆಸಿದ್ದಕ್ಕಾಗಿ ನಾನು ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ನಿಮಿಷಾಪ್ರಿಯ ಅವರನ್ನು ಓಮನ್, ಜೆಡ್ಡಾ, ಈಜಿಪ್ಟ್, ಇರಾನ್ ಅಥವಾ ಟರ್ಕಿ ಮೂಲಕ ಭಾರತಕ್ಕೆ ಕರೆತರುವ ಸಾಧ್ಯತೆ ಇದೆ.

 

Leave a Reply

Your email address will not be published. Required fields are marked *

error: Content is protected !!