ಉದಯವಾಹಿನಿ, ನವದೆಹಲಿ: ಮುಂಗಾರು ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಸಂಸತ್‌ ಭವನದ ಪಕ್ಕದ ಮಸೀದಿಯಲ್ಲಿ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ ನಡೆಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮಸೀದಿಯನ್ನು ನಿಮ್ಮ ಸಮಾಜವಾದಿ ಪಕ್ಷದ ಕಚೇರಿಯಾಗಿ ಬದಲಾವಣೆ ಮಾಡ್ಕೊಂಡಿದ್ದೀರಾ? ಅಂತ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಶ್ನಿಸಿದೆ. ಇದಕ್ಕೆ ಇರುಗೇಟು ನೀಡಿರುವ ಅಖಿಲೇಶ್‌ ಯಾದವ್‌, ಮದೀಸಿಗೆ ನನ್ನ ಭೇಟಿಯ ಬಗ್ಗೆ ಬಿಜೆಪಿ ವಿವಾದ ಸೃಷಿಸುತ್ತಿದೆ. ನಮಗೆ ಎಲ್ಲಾ ಧರ್ಮಗಳಲ್ಲಿಯೂ ನಂಬಿಕೆ ಇದೆ. ನಾವು ಒಗ್ಗಟ್ಟಾಗುತ್ತೇವೆ ಅನ್ನೋ ನಂಬಿಕೆ ನಮಗಿದೆ. ಆದ್ರೆ ಬಿಜೆಪಿ ವಿಭಜನೆಯಾಗಿಯೇ ಉಳಿಯಬೇಕೆಂದು ಬಯಸುತ್ತದೆ ಅಂತ ತಿರುಗೇಟು ನೀಡಿದ್ದಾರೆ.
ಮುಂದುವರಿದು.. ಯಾವುದೇ ಧರ್ಮದಲ್ಲಿ ನಂಬಿಕೆಯಿದ್ದರೆ, ಅದು ಎಲ್ಲರನ್ನೂ ಒಗ್ಗೂಗೂಡಿಸುತ್ತದೆ. ಆದ್ರೆ ಬಿಜೆಪಿ ಜನರ ನಡುವಿನ ಅಂತರವನ್ನೇ ನೋಡಲು ಬಯಸುತ್ತೆ. ಬಿಜೆಪಿಯ ತಂತ್ರಗಳ ಬಗ್ಗೆ ಈಗ ಜನಕ್ಕೆ ಅರ್ಥವಾಗಿದೆ. ʻಧರ್ಮʼ ಅನ್ನೋದನ್ನೇ ಬಿಜೆಪಿ ಅಸ್ತ್ರವಾಗಿ ಮಾಡಿಕೊಂಡಿದೆ ಎಂದು ತಿವಿದಿದ್ದಾರೆ

Leave a Reply

Your email address will not be published. Required fields are marked *

error: Content is protected !!