ಉದಯವಾಹಿನಿ, ನವದೆಹಲಿ: ಬೆಕ್ಕುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅವುಗಳ ತುಂಟಾಟ, ಕೋಪ, ಬುದ್ಧಿವಂತಿಕೆ ಇತ್ಯಾದಿ ವಿಡಿಯೊಗಳನ್ನು ನೀವು ನೋಡಿರಬಹುದು. ಹಾವು, ಕೋತಿ, ಶ್ವಾನವನ್ನೂ ಬೆದರಿಸುವ ಜಾಣತನ ಬೆಕ್ಕಿಗಿದೆ. ಬೆಕ್ಕುಗಳು ಆತ್ಮವಿಶ್ವಾಸವನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿವೆ. ಇದೀಗ ವೈರಲ್ ಆಗಿರುವ ವಿಡಿಯೊ ನಿಜವಾಗಿಯೂ ನೆಟ್ಟಿಗರಿಗೆ ಶಾಕಿಂಗ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಮನೆಯ ಮುಂಭಾಗದ ವರಾಂಡಾದಲ್ಲಿ ಬೆಕ್ಕು ಶಾಂತವಾಗಿ ಕುಳಿತಿರುವುದನ್ನು ನೋಡಬಹುದು. ಶಾಂತವಾಗಿದ್ದ ರಾತ್ರಿ ವೇಳೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಚಿರತೆ ಕಾಣಿಸಿಕೊಳ್ಳುತ್ತದೆ. ಬೆಕ್ಕು ಭಯಗೊಳ್ಳುವ ಬದಲು ಎದ್ದು ನಿಂತು ಮಿಯಾಂವ್ ಎಂದಿದೆ. ನಂತರ ಆಶ್ಚರ್ಯಕರವಾಗಿ ಬೆಕ್ಕು ಮತ್ತು ಚಿರತೆ ಎರಡೂ ಒಟ್ಟಿಗೆ ಹೋಗುವುದನ್ನು ಕಾಣಬಹುದು. ಆ ಕ್ಷಣ ಮಾತ್ರ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಹಾಗಂತ ವಿಡಿಯೊ ಅಲ್ಲಿಗೆ ನಿಲ್ಲಲಿಲ್ಲ.
ಚಿರತೆ ಮತ್ತೆ ಆ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಮಾತ್ರ ಬೆಕ್ಕು ಬೆನ್ನಿನ ಮೇಲೆ ನಿಂತಿರುವುದು ಕಂಡುಬರುತ್ತದೆ. ಜುಲೈ 17 ರಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಹಿಡಿಯಲಾದ ಈ ಕ್ಷಣವನ್ನು ‘ಬೆಕ್ಕು ಎಲ್ಲವನ್ನೂ ನಿಭಾಯಿಸಬಲ್ಲದು’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
