ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಹುಚ್ಚಾಟ ಜೋರಾಗಿದೆ. ಏನೇ ನೋಡಿದರೂ ಸೆಲ್ಫಿ ತೆಗೆದುಕೊಳ್ಳಲು ಅನೇಕರು ಮುಂದಾಗುತ್ತಾರೆ. ಸೆಲ್ಫಿ ಹುಚ್ಚಾಟಕ್ಕೆ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡ ಉದಾಹರಣೆಯೂ ಇದೆ. ಇದೀಗ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಯುವಕನೊಬ್ಬನಿಗೆ ಹೆಬ್ಬಾವು ಕಡಿದ ಘಟನೆಯ ವಿಡಿಯೊ ವೈರಲ್ ಆಗಿದೆ.ಉರಗ ರಕ್ಷಕರೊಬ್ಬರು ಹೆಬ್ಬಾವನ್ನು ರಕ್ಷಿಸಿದರು. ಹೆಬ್ಬಾವನ್ನು ಕೈಯಲ್ಲಿ ಹಿಡಿದು ಬರುತ್ತಿದ್ದ ವೇಳೆ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಲೆ ಹೆಬ್ಬಾವು ಆತನ ಕೈಗೆ ಕಚ್ಚಿದ್ದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೃಶ್ಯದಲ್ಲಿ ಹಾವು ರಕ್ಷಿಸುವ ವ್ಯಕ್ತಿಯ ಕೈಯಲ್ಲಿ ಭಾರತೀಯ ಹೆಬ್ಬಾವು ಇರುವುದನ್ನು ನೋಡಬಹುದು. ಈ ವೇಳೆ ಒಬ್ಬ ವ್ಯಕ್ತಿ ಮುಂದೆ ಬಂದು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಹಾವು ಇದ್ದಕ್ಕಿದ್ದಂತೆ ವ್ಯಕ್ತಿಯ ಕೈಯನ್ನು ಬಾಯಿಯಿಂದ ಹಿಡಿದುಕೊಳ್ಳುತ್ತದೆ. ಇದು ನೋಡುಗರನ್ನು ಆಘಾತಕ್ಕೊಳಿಸಿದೆ. ಘಟನೆಯಿಂದ ಹಾವು ರಕ್ಷಿಸಿದಾತನೂ ಒಂದಕ್ಷಣ ವಿಚಲಿತಗೊಂಡಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
