ಉದಯವಾಹಿನಿ, ಮಾಸ್ಕೋ: ತಾಂತ್ರಿಕ ದೋಷದಿಂದ ರಷ್ಯಾದ ವಿಮಾನ ಪೂರ್ವ ಅಮುರ್ ಪ್ರದೇಶದಲ್ಲಿ ಪತನಗೊಂಡಿದ್ದು 48 ಮಂದಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ.ಸೈಬೀರಿಯಾ ಮೂಲದ ಅಂಗಾರ (Angara) ಎಂಬ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ AN-24 ಸಂಖ್ಯೆಯ ವಿಮಾನ ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ (Tynda) ಪಟ್ಟಣದ ಬಳಿ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿತು. ಇದಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ತಿಳಿದುಬಂದಿದೆ.ಪ್ರಯಾಣಿಕ ವಿಮಾನದಲ್ಲಿ (ಪ್ಯಾಸೆಂಜರ್‌ ಫ್ಲೈಟ್) 6 ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿ 49 ಮಂದಿ ಇದ್ದರು ಅಂತ ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ.

ವಿಮಾನದಲ್ಲಿದ್ದ ಎಲ್ಲಾ 50 ಮಂದಿ ಸಾವನ್ನಪ್ಪಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ TASS ಹೇಳಿದೆ. ಆದ್ರೆ ಅಧಿಕೃತವಾಗಿ ಸಾವನ್ನಪ್ಪಿರುವುದು ಬಹಿರಂಗವಾಗಿಲ್ಲ. ಈ ನಡುವೆ ಹೆಲಿಕಾಪ್ಟರ್‌ನ ಅವಶೇಷಗಳನ್ನು ರಕ್ಷಣಾ ಹೆಲಿಕಾಪ್ಟರ್‌ಗಳು ಪತ್ತೆಹಚ್ಚಿರುವುದಾಗಿ ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!