ಉದಯವಾಹಿನಿ, ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಒಳ್ಳೆಯ ಕಂಟೆಂಟ್ ಸಿನಿಮಾಗಳು ಬರುತ್ತಿಲ್ಲ. ಸಿನಿಮಾ ನೋಡೋಕೆ ಥಿಯೇಟರ್‌ನತ್ತ ಪ್ರೇಕ್ಷಕರು ಕೂಡಾ ಬರ್ತಿಲ್ಲ ಅನ್ನುವ ಮಾತುಗಳ ಮಧ್ಯೆ ಹೊಸಬರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡ್ತಿವೆ. ಜುಲೈ 18ರಂದು ತೆರೆಕಂಡ ಬಾಲಿವುಡ್ ಸಿನಿಮಾ `ಸೈಯಾರ’ ಬಾಕ್ಸಾಫೀಸ್ ಉಡೀಸ್ ಮಾಡಿದೆ. ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡ್ತಿದೆ.
ಸೈಯಾರ ಅದ್ಭುತವಾಗಿ ರೆಸ್ಪಾನ್ಸ್ ಪಡೆದುಕೊಂಡು ಎರಡನೇ ವಾರವೂ ಯಶಸ್ವಿ ಪ್ರದರ್ಶನ ಕಾಣ್ತಿರುವ ಸಿನಿಮಾ. ಅಹಾನ್ ಪಾಂಡೆ (Ahaan Panday) ಹಾಗೂ ಅನೀತಾ ಪಡ್ಡಾ ಅಭಿನಯಕ್ಕೆ ಮನಸೋತ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಬಾಕ್ಸಾಫೀಸ್‌ನಲ್ಲೂ ಹಣ ಹಾಗೆ ಹರಿಯುತ್ತಿದೆ. ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರ ಜೇಬು ತುಂಬುತ್ತಿದೆ. ಈ ಮೂಲಕ ನಿರ್ಮಾಪಕರಿಗೆ, ಇಂಡಸ್ಟ್ರಿ ಜನರಿಗೆ ಮತ್ತಷ್ಟು ಹೊಸ ಉತ್ಸಾಹ ಸಿಕ್ಕಿದೆ. ಈ ವರ್ಷದ ಮೊದಲಾರ್ಧವನ್ನ ಮರೆತು, ದ್ವಿತಿಯಾರ್ಧದ ಕಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಸೈಯಾರ ತೆರೆಕಂಡ ಮೊದಲ ದಿನವೇ 21.5 ಕೋಟಿ ರೂ. ಗಳಿಕೆ ಮಾಡಿತ್ತು. ವೀಕೆಂಡ್‌ನಲ್ಲಿ ಭರ್ಜರಿ ಮೊತ್ತವನ್ನೇ ಕಲೆಹಾಕಿತ್ತು. ಇದೀಗ ಒಂದು ವಾರಕ್ಕೆ ಬರೋಬ್ಬರಿ 200 ಕೋಟಿ ರೂ. ಗಳಿಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ ಸೈಯಾರ ಸಿನಿಮಾ. ಮೋಹಿತ್ ಸೂರಿ ನಿರ್ದೇಶನದಲ್ಲಿ ಮೂಡಿಬಂದ ರೋಮ್ಯಾಂಟಿಕ್ ಡ್ರಾಮಾ ಜಾನರ್‌ನ ಸಿನಿಮಾ ಈ ಜನರೇಷನ್‌ಗೆ ಮೋಡಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!