ಉದಯವಾಹಿನಿ, ಮ್ಯಾಂಚೆಸ್ಟರ್:‌ ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌(Shubman Gill) ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌(England vs India 4th Test) ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಹಲವು ದಾಖಲೆಯನ್ನು ನಿರ್ಮಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ಭಾರತ ಪರ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪೈಕಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.

ಇದು ಹಾಲಿ ಆವೃತ್ತಿಯ ಸರಣಿಯಲ್ಲಿ ಶುಭಮನ್‌ ಗಿಲ್‌ ಬಾರಿಸಿ ನಾಲ್ಕನೇ ಶತಕವಾಗಿದೆ. ಇದರೊಂದಿಗೆ ಈ ಹಿಂದೆ 4 ಶತಕ ಬಾರಿಸಿದ್ದ ಸುನೀಲ್‌ ಗವಾಸ್ಕರ್‌, ವಿರಾಟ್‌ ಕೊಹ್ಲಿ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು. ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಗಿಲ್‌ ಶತಕ ಬಾರಿಸಿದರೆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಬಹುದು. ಸುನೀಲ್‌ ಗವಾಸ್ಕರ್‌ ಎರಡು ಬಾರಿ ಟೆಸ್ಟ್‌ ಸರಣಿಯೊಂದರಲ್ಲಿ 4 ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ವಿದೇಶಿ ಮತ್ತು ತವರು ನೆಲದಲ್ಲಿ.

ಟೆಸ್ಟ್ ಸರಣಿಯಲ್ಲಿ ಭಾರತ ಪರ ಅತಿ ಹೆಚ್ಚು ಶತಕ
4 ಶತಕ; ಸುನಿಲ್ ಗವಾಸ್ಕರ್ vs ವಿಂಡೀಸ್, 1971 (ವಿದೇಶದಲ್ಲಿ)

4 ಶತಕ; ಸುನಿಲ್ ಗವಾಸ್ಕರ್ vs ವಿಂಡೀಸ್, 1978/79 (ತವರಿನಲ್ಲೇ)

4 ಶತಕ; ವಿರಾಟ್ ಕೊಹ್ಲಿ vs ಆಸ್ಟ್ರೇಲಿಯ, 2014/15 (ವಿದೇಶದಲ್ಲಿ)

4 ಶತಕ; ಶುಭ್‌ಮನ್ ಗಿಲ್ vs ಇಂಗ್ಲೆಂಡ್, 2025 (ವಿದೇಶದಲ್ಲಿ)

ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಗಿಲ್‌
ಈ ಶತಕದ ಮೂಲಕ ಶುಭಮನ್‌ ಗಿಲ್‌ ಅವರು ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಬ್ರಾಡ್ಮನ್‌ ಸೇರಿ ಸುನೀಲ್‌ ಗವಾಸ್ಕರ್‌ ಅವರ ದಾಖಲೆಯನ್ನು ಸರಿಗಟ್ಟಿದರು. ನಾಯಕನಾಗಿ ಬ್ರಾಡ್ಮನ್‌, ಗವಾಸ್ಕರ್‌ ಮತ್ತು ಗಿಲ್‌ 4 ಶತಕ ಬಾರಿಸಿದ್ದಾರೆ.

ನಾಯಕನಾಗಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ
ಸರ್ ಡಾನ್ ಬ್ರಾಡ್ಮನ್-4 ಶತಕ; ಭಾರತ ವಿರುದ್ಧ 1947/48

ಸುನಿಲ್ ಗವಾಸ್ಕರ್-4 ಶತಕ; ವಿಂಡೀಸ್‌ ವಿರುದ್ಧ 1978/79

ಶುಭಮನ್ ಗಿಲ್-4 ಶತಕ; ಇಂಗ್ಲೆಂಡ್ ವಿರುದ್ಧ 2025

Leave a Reply

Your email address will not be published. Required fields are marked *

error: Content is protected !!