ಉದಯವಾಹಿನಿ, ರಶ್ಮಿಕಾ ಮಂದಣ್ಣ ನಟನೆಯ ಬಹು ನಿರೀಕ್ಷೆಯ ಮೈಸಾ ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನಡೆಯಿತು. ಹೊಸ ಸಿನಿಮಾದ ಪೂಜೆಯಲ್ಲಿ ನಟಿ ರಶ್ಮಿಕಾ ಬುಡಕಟ್ಟು ಮಹಿಳೆಯರೊಂದಿಗೆ ಗೋಂಡ್ ಹಾಡಿಗೆ ಡಾನ್ಸ್ (Dance) ಮಾಡಿ ಸಂಭ್ರಮಿಸಿದರು. ಜೊತೆಗೆ ಗೋಂಡ್ ಸಮುದಾಯದೊಂದಿಗೆ ಕೆಲವು ಸಮಯ ಕಾಲ ಕಳೆದರು. ಹೊಸ ಅವತಾರದಲ್ಲಿ ರಶ್ಮಿಕಾ ಮಂದಣ್ಣ,. ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಮೈಸಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಐದು ಭಾಷೆಯಲ್ಲಿ ನಿರ್ಮಾಣವಾಗಲಿದೆ . ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದು, ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ನಟಿ ರಶ್ಮಿಕಾ ಮಂದಣ್ಣ. ಆ ಸಿನಿಮಾದ ಗೆಲುವು ರಶ್ಮಿಕಾರ ವೃತ್ತಿ ಬದುಕಿಗೆ ಭದ್ರಬುನಾದಿಯನ್ನೇ ಹಾಕಿತು. ಎರಡನೇ ಸಿನಿಮಾದಲ್ಲೇ ಪುನೀತ್ ರಾಜ್‌ಕುಮಾರ್ ಅವರಿಗೆ ನಾಯಕಿಯಾದರು. ಗೋಲ್ಡನ್ ಸ್ಟಾರ್ ಗಣೇಶ್, ದರ್ಶನ್, ಧ್ರುವ ಸರ್ಜಾ ಹೀಗೆ ಸ್ಟಾರ್ ನಟರ ಚಿತ್ರಗಳೇ ರಶ್ಮಿಕಾರನ್ನು ಹುಡುಕಿಕೊಂಡು ಬಂದವು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೆಲುವಿನ ಏಣಿ ಏರಿಯೇ ಬಿಟ್ಟರು ರಶ್ಮಿಕಾ ಮಂದಣ್ಣ. ಈ ಹುಡುಗಿಯ ಮೇಲೆ ಪರಭಾಷಾ ನಿರ್ದೇಶಕರ ಕಣ್ಣು ಬಿತ್ತು. ನೋಡ ನೋಡುತ್ತಿದ್ದಂತೆಯೇ ತೆಲುಗಿಗೆ ಹೊರಟು ನಿಂತರು ಕೊಡಗಿನ ಬೆಡಗಿ. ರಶ್ಮಿಕಾರ ಅದೃಷ್ಟವೋ, ಸಿನಿಮಾ ತಂಡದ ಶ್ರಮವೋ ತೆಲುಗಿನಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಿದರು.
