ಉದಯವಾಹಿನಿ, ಕರ್ನಾಟಕದ ಗ್ರಾಮೀಣ ಭಾಗದ ಕತೆ ಈ ಚಿತ್ರದಲ್ಲಿದೆ. ಶೋಷಣೆಯ ವ್ಯಥೆನೂ ಈ ಚಿತ್ರದಲ್ಲಿ ತೋರಲಾಗಿದೆ. ರಾಚಯ್ಯ ಅನ್ನುವ ಅಂತರ್ಮುಖಿ ವ್ಯಕ್ತಿಯ ಕಥೆ ಇದಾಗಿದೆ. ಆದರೆ, ಈತ ಸಿಡಿದೇಳುವ ಸತ್ಯವೂ ಇದೇ ಸಿನಿಮಾದಲ್ಲಿದೆ. ಸರಳ ಕಥೆಯಲ್ಲಿ ಭಾವನೆಗಳಿಗೆ ಒತ್ತು ಕೊಡುವ ಕೆಲಸವೂ ಇಲ್ಲಾಗಿದೆ. ಅದಕ್ಕೇನೆ ಸಿಂಪಲ್ ಕಥೆ ಇದ್ದರೂ ಅಭಿನಯಿಸೋಕೆ ಅದ್ಭುತ ಎಮೋಷನ್ಸ್ ಇವೆ ಅಂತ ಚಿತ್ರದ ನಾಯಕಿ ಹೇಳಿಕೊಂಡಿದ್ದಾರೆ. ನಿಂಗವ್ವ ಅನ್ನುವ ಈ ಪಾತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ. ರಾಚಯ್ಯನಾಗಿ ದುನಿಯಾ ವಿಜಯ್ ನಟಿಸಿದ್ದಾರೆ. ಇವರ ಈ ಚಿತ್ರ ಜನವರಿ-23 ರಂದು ತೆರೆಗೆ ಬಂದಿತ್ತು.

ಜೀ5 ಅಲ್ಲ ಸ್ಟ್ರೀಮಿಂಗ್
ಲ್ಯಾಂಡ್‌ಲಾರ್ಡ್ ಚಿತ್ರ ಇದೇ ತಿಂಗಳು ಇದು ಸ್ಟ್ರೀಮಿಂಗ್ ಆಗುತ್ತಿದೆ. ಜೀ5 ಅಲ್ಲಿಯೇ ಇದು ಪ್ರಸಾರ ಆಗುತ್ತಿದೆ. ಇದೇ ಮಾರ್ಚ್-19 ರಂದು ಈ ಚಿತ್ರ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರದಲ್ಲಿ ಶೋಷಣೆಯ ಕಥೆ ಇದೆ. ಹೋರಾಟದ ಕಿಚ್ಚು ಇದೆ. ರಾಚಯ್ಯ ತನ್ನ ಹಕ್ಕಿಗಾಗಿಯೇ ಹೋರಾಡ್ತಾನೆ. ಪತ್ನಿ ನಿಂಗವ್ವ ಮಗಳು ಭಾಗ್ಯ ಕೂಡ ಸಾಥ್ ಕೊಡ್ತಾರೆ. ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಸಣ್ಣ ಧಣಿಯ ರೋಲ್ ಮಾಡಿದ್ದಾರೆ. ಇದು ಒಳ್ಳೆ ಪಾತ್ರವೇನು ಅಲ್ಲ ಬಿಡಿ. ಅಪ್ಪಟ ಅಟ್ಟಹಾಸ ಮೆರೆಯೋ ಪಾತ್ರವೇ ಆಗಿದೆ. ಈ ಪಾತ್ರವನ್ನ ರಾಜ್ ಬಿ ಶೆಟ್ಟಿ ತುಂಬಾನೆ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಇವರ ಪಾತ್ರಕ್ಕೆ ಪ್ರಶಂಸೆನೂ ಬಂದಿವೆ. ರಾಚಯ್ಯ ಪಾತ್ರಧಾರಿ ದುನಿಯಾ ವಿಜಯ್ ಕೂಡ ಅದ್ಭುತವಾಗಿಯೇ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!