ಉದಯವಾಹಿನಿ, ಕೋಟಿಗೊಬ್ಬ ಚಿತ್ರ ಬಂದು 25 ವರ್ಷ ಆಗಿದೆ. ಈ ಖುಷಿಯನ್ನ ದೊಡ್ಡಮಟ್ಟದಲ್ಲಿ ಸಂಭ್ರಮಿಸಿದ್ದಾರೆ. ಸಿನಿಮಾ ಕಲಾವಿದರು, ವಿಷ್ಣುವರ್ಧನ್ ಅಭಿಮಾನಿಗಳು ಹೀಗೆ ಎಲ್ಲರೂ ಸೇರಿಯೇ ಈ ಒಂದು ಕ್ಷಣವನ್ನ ಸಂಭ್ರಮಿಸಿದ್ದಾರೆ. ವಿಷ್ಣುವರ್ಧನ್ ಅಣ್ಣನ ಮಗ ಕೂಡ ಈ ಕಾರ್ಯಕ್ರಮಕ್ಕೆ ಬಂದು ಹೋಗಿದ್ದಾರೆ. ಚಿಕ್ಕಪ್ಪನ ಬಗ್ಗೆ ತಮಗೆ ಅನಿಸಿರೋದನ್ನ ಹೇಳಿ ಹೋಗಿದ್ದಾರೆ. ಮಾರ್ಚ್-13 ರಂದು ಶುಕ್ರವಾರ ಈ ಚಿತ್ರದ ಟ್ರೈಲರ್ ಕೂಡ ಪ್ರದರ್ಶನ ಆಗಿದೆ.

ಕೋಟಿಗೊಬ್ಬ ಚಿತ್ರದ 25 ವರ್ಷದ ಸಂಭ್ರಮ ಜೋರಾಗಿಯೇ ಆಗಿದೆ. ಹಾಗೆ ಸ್ಟಾರ್ ನಟರು ಈ ಸಡಗರದಲ್ಲಿ ಭಾಗಿ ಆಗಿದ್ದರು. ಆದರೆ, ಇದರ ಬೆನ್ನಲ್ಲಿಯೇ ಈ ಚಿತ್ರ ರೀ-ರಿಲೀಸ್ ವಿಚಾರವೂ ಕೇಳಿ ಬಂದಿತ್ತು. ನಿರ್ಮಾಪಕ ಸೂರಪ್ಪ ಬಾಬು ಅವರು ಈ ಚಿತ್ರವನ್ನ ಹೊಸ ಸ್ಪರ್ಶದೊಂದಿಗೆ ಮತ್ತೆ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ. ಅದಕ್ಕೇನೆ ಈ ಒಂದು ಸಂಭ್ರಮದಲ್ಲಿ ಆ ವಿಚಾರವು ಬಂತು. ರಿಯಲ್ ಸ್ಟಾರ್ ಉಪೇಂದ್ರ ಹೇಳಿದರು. ಕೋಟಿಗೊಬ್ಬ ಚಿತ್ರ ರೀ-ರಿಲೀಸ್ ಆಗುತ್ತದೆ. ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರವು ರೀ-ರಿಲೀಸ್ ಆಗಬೇಕು ಅಂತಲು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!