ಉದಯವಾಹಿನಿ, ನವದೆಹಲಿ: ಉಗ್ರರು ಪಹಲ್ಗಾಮ್‌ನ ಬೈಸರನ್‌ ಕಣಿವೆ ಪ್ರದೇಶಕ್ಕೆ ಬಂದಿದ್ದು ಹೇಗೆ ಅಂತ ರಾಜನಾಥ್‌ ಸಿಂಗ್‌ ಮಾಹಿತಿಯೇ ನೀಡಲಿಲ್ಲ ಅಂತ ಕಾಂಗ್ರೆಸ್‌ ಮುಖಂಡ ಗೌರವ್‌ ಗೊಗೊಯ್‌ ಕೇಂದ್ರ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಟೀಕಿಸಿದರು.ಪಹಲ್ಗಾಮ್‌ ದಾಳಿ & ಆಪರೇಷನ್‌ ಸಿಂಧೂರ ಚರ್ಚೆ ವೇಳೆ ಮಾತನಾಡಿದ ಗೊಗೊಯ್‌, ವಿಪಕ್ಷಗಳು ಸಂಪೂರ್ಣ ಸಹಕಾರ ನೀಡಿದ್ರೂ ಉಗ್ರರನ್ನ ಬಂಧಿಸಲು ಸಾಧ್ಯವಾಗಿಲ್ಲ. ಜಮ್ಮು ಕಾಶ್ಮೀರ ದಾಳಿಯ ನೈತಿಕ ಹೊಣೆಯನ್ನ ಅಮಿತ್ ಶಾ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ರಕ್ಷಣಾ ಸಚಿವರಾಗಿ ರಾಜನಾಥ್ ಸಿಂಗ್ ಎಲ್ಲ ಮಾಹಿತಿ ನೀಡಿದರು. ಆದ್ರೆ ಕಾಶ್ಮೀರದ ಬೈಸರನ್‌ಗೆ ಭಯೋತ್ಪಾದಕರು (Terrorists) ಹೇಗೆ ಬಂದರು ಎನ್ನುವುದಕ್ಕೆ ಉತ್ತರವನ್ನೇ ಕೊಡಲಿಲ್ಲ. ನಾವು ವಿಪಕ್ಷವಾಗಿ ಈ ಪ್ರಶ್ನೆಯನ್ನ ಕೇಳುತ್ತಿದ್ದೇವೆ. ಆ ಭಯೋತ್ಪಾದಕರು ಅಂದು ಹೇಗೆ ಒಳಗೆ ನುಸುಳಿದ್ರು ಅಂತ ಪ್ರಶ್ನೆ ಮಾಡಿದ್ರು.ಉಗ್ರರು ಯಾರು ಅನ್ನೋದೇ ಗೊತ್ತಿಲ್ಲ
ಕಾಶ್ಮೀರದ ಆರ್ಥಿಕತೆ ಹಾಳು ಮಾಡುವುದು ಅವರ ಉದ್ದೇಶವಾಗಿತ್ತು. ಬೈಸರನ್‌ನಲ್ಲಿ ಕಾಶ್ಮೀರಿ ಜನರು ಪ್ರವಾಸಿಗರು ಹೇಗೆ ಜೀವ ಉಳಿಸಿಕೊಂಡ್ರು ಅಂತ ಎಲ್ಲರೂ ನೋಡಿದ್ದಾರೆ. ವಿಪಕ್ಷಗಳು ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿತ್ತು. ಆದ್ರೆ ಈವರೆಗೂ ಈ ಭಯೋತ್ಪಾದಕರನ್ನ ಬಂಧಿಸಲು ಸಾಧ್ಯವಾಗಿಲ್ಲ. ಘಟನೆ ನಡೆದು ನೂರು ದಿನಗಳ ಕಳೆದರೂ ಅವರು ನುಸುಳಿದ್ದು ಹೇಗೆ ಅನ್ನೋದೇ ಗೊತ್ತಿಲ್ಲ. ಅವರು ಯಾರೂ ಅಂತಾನೂ ಗೊತ್ತಿಲ್ಲ, ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದು ಯಾವ ರೀತಿಯ ಭದ್ರತೆ? ಕಾಶ್ಮೀರಕ್ಕೆ ಜನರು ಬನ್ನಿ ಎಂದು ಸರ್ಕಾರ ಹೇಳುತ್ತದೆ. ಆದ್ರೆ ಬೈಸರನ್‌ನಲ್ಲಿ ಏನಾಯಿತು, ಒಂದು ಅಂಬುಲೆನ್ಸ್‌ ಬರೋದಕ್ಕೆ ಗಂಟೆಯಾಯ್ತು ಎಂದು‌ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು.

Leave a Reply

Your email address will not be published. Required fields are marked *

error: Content is protected !!