ಉದಯವಾಹಿನಿ, ಭೂಮಿಯ ಮೇಲಿರುವ ಪ್ರತಿಯೊಂದು ತನ್ನದೇ ಆದ ವಿಭಿನ್ನ ಲಕ್ಷಣಗಳೊಂದಿಗೆ ಹುಟ್ಟಿಕೊಂಡಿರುತ್ತದೆ. ವಿಭಿನ್ನವಾದ ಗುಣಗಳೊಂದಿಗೆ ತನ್ನಲ್ಲಿ ಹೊಸತನವನ್ನು ಕಂಡುಕೊಳ್ಳುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಹವಾಮಾನ, ಮಳೆ, ಬಿಸಿಲು, ಅದರ ಜೊತೆ ಜೊತೆಗೆ ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ನಿಸರ್ಗದ ಮೇಲಾಗುತ್ತಿರುವ ಪರಿಣಾಮ ಇವೆಲ್ಲವೂ ಹೊಂದಿಲ್ಲೊಂದು ರೀತಿಯಲ್ಲಿ ಪ್ರತಿಯೊಂದು ಜೀವಿಯ ಮೇಲೆಯೂ ಪ್ರಭಾವ ಬೀರುತ್ತದೆ.ಹೌದು, ದಕ್ಷಿಣ ಆಸ್ಟ್ರೇಲಿಯಾದ ಕರಾವಳಿ ತೀರಗಳಲ್ಲಿ ಆಲ್ಗಲ್ ಬ್ಲೂಮ್ ನೈಸರ್ಗಿಕ ವಿಪತ್ತಾಗಿ ಪರಿವರ್ತನೆಗೊಂಡಿದೆ. ಇದರಿಂದಾಗಿ ಪರಿಸರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದ್ದು, ಜಲಚರ ಜೀವಿಗಳಿಗೆ ಅಪಾಯ ಉಂಟು ಮಾಡುತ್ತಿದೆ. ಅದಲ್ಲದೆ ಮಾನವನ ಉದ್ಯಮದ ಮೇಲೆಯೂ ಪರಿಣಾಮ ಬೀರುತ್ತದೆ. ಏನಿದು ಆಲ್ಗಲ್ ಬ್ಲೂಮ್ ಇದರ ಹಿಂದಿನ ಕಾರಣವೇನು? ಇದೆಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಆಲ್ಗಲ್ ಬ್ಲೂಮ್..?
ಸಾಮಾನ್ಯವಾಗಿ ಹೇಳುವುದಾದರೆ ಆಲ್ಗಲ್ ಬ್ಲೂಮ್ ಎಂದರೆ ಪಾಚಿ ಎಂದರ್ಥ. ನಿಂತ ನೀರು ಅಥವಾ ಸದಾ ಹರಿಯುತ್ತಿರುವ ನೀರಿನ ತಳಭಾಗದಲ್ಲಿ ಬೆಳೆಯುವ ಒಂದು ರೀತಿಯ ಸಸ್ಯ ಜಾತಿಯನ್ನು ಪಾಚಿ ಎಂದು ಕರೆಯಲಾಗುತ್ತದೆ. ಸಮುದ್ರ, ನದಿ ಹಾಗೂ ಕೆರೆಗಳಲ್ಲಿ ಇದು ಬೆಳೆಯುತ್ತದೆ. ಇದನ್ನು ಮೈಕ್ರೋ ಆಲ್ಗಿಗಳು ಎಂತಲೂ ಕರೆಯಲಾಗುತ್ತದೆ. ಇದು ನೀರಿನಲ್ಲಿ ತ್ವರಿತವಾಗಿ ವೃದ್ಧಿಯಾಗುವ ಒಂದು ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆ ಹೆಚ್ಚಾದಾಗ ಇದು ನೀರಿನ ಮೇಲೆಯೂ ತೇಲುತ್ತದೆ. ಇದರಿಂದ ನೀರಿಗೆ ಹಸಿರು, ಕೆಂಪು ಅಥವಾ ನೀಲಿ ಬಣ್ಣ ಬರುತ್ತದೆ. ಇದರಿಂದ ಪರಿಸರಕ್ಕೆ ಹಾಗೂ ಜಲಚರ ಜೀವಿಗಳಿಗೆ ಸಮಸ್ಯೆ ಉಂಟಾಗುತ್ತದೆ.
ದರ ಲಕ್ಷಣಗಳೇನು:
ನೀರಿನಲ್ಲಿ ಹಸಿರು ಪಾಚಿ ಬೆಳೆದಿದೆ ಎಂದು ಗೊತ್ತಾಗಬೇಕಾದರೆ ನೀರು ಅಥವಾ ನೀರಿನಲ್ಲಿ ಹಸಿರು ಬಣ್ಣ ಕಾಣಿಸುತ್ತದೆ. ಜೊತೆಗೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಜಲಚರ ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ. ಅದಲ್ಲದೆ ನೀರಿನಲ್ಲಿ ವಿಷದ ಪ್ರಮಾಣ ಬಿಡುಗಡೆ ಮಾಡುತ್ತದೆ. ಬಳಿಕ ನೀರಿನಿಂದ ದುರ್ವಾಸನೆ ಉಂಟಾಗುತ್ತದೆ.
