ಉದಯವಾಹಿನಿ, ವಾಷಿಂಗ್ಟನ್‌: ಅಮೆರಿಕದ ಡೆನ್ವರ್ ವಿಮಾನ ನಿಲ್ದಾಣದಿಂದ ಮಿಯಾಮಿಗೆ ತೆರಳಬೇಕಿದ್ದ ಅಮೇರಿಕನ್ ಏರ್‌ಲೈನ್ಸ್‌ನ ಬೋಯಿಂಗ್ 737 MAX 8 ವಿಮಾನದ ಲ್ಯಾಂಡಿಂಗ್ ಗೇರ್ ಕೈಕೊಟ್ಟಿದೆ. ಪೈಲಟ್‌ ಟೇಕಾಫ್‌ ಸ್ಥಗಿತಗೊಳಿಸಿದ್ದು, ಈ ವೇಳೆ ವಿಮಾನದ ಹಿಂಭಾಗದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದ ತುರ್ತು ದ್ವಾರಗಳಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 2:45 ಕ್ಕೆ ಈ ಘಟನೆ ಸಂಭವಿಸಿದೆ. ಈ ಅವಘಡದಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಇದರಲ್ಲಿ ಒಬ್ಬನಿಗೆ ಚಿಕಿತ್ಸೆ ಅಗತ್ಯವಿತ್ತು ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಟೆಕಾಫ್‌ ಆಗುವ ಕೆಲವೇ ಕ್ಷಣಗಳ ಮೊದಲು ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಎಚ್ಚೆತ್ತ ಪೈಲಟ್ ವಿಮಾನವನ್ನು ಹಠಾತ್‌ ಆಗಿ ನಿಲ್ಲಿಸಿದ್ದಾರೆ. ಈ ವೇಳೆ ಟೈರ್‌ಗಳು ಮತ್ತು ಬ್ರೇಕಿಂಗ್ ಲ್ಯಾಂಡಿಂಗ್ ಗೇರ್ ಬಳಿ ಬೆಂಕಿ ಕಾಣಿಸಿದೆ. ವಿಮಾನ ಕೆಲ ಸಮಯ ರನ್‌ ವೇಯಲ್ಲೇ ನಿಂತಿದ್ದರಿಂದ 90 ವಿಮಾನಗಳ ಹಾರಾಟ ವಿಳಂಬವಾಗಿದೆ.

Leave a Reply

Your email address will not be published. Required fields are marked *

error: Content is protected !!