ಉದಯವಾಹಿನಿ, ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯೊಂದು, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಹೊಣೆಯನ್ನ ಉಗ್ರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಎರಡು ಬಾರಿ ಹೊತ್ತುಕೊಂಡಿದೆ ಎಂದು ಬಹಿರಂಗಪಡಿಸಲಾಗಿದೆ.ಈ ದಾಳಿಯ ಸ್ಥಳದ ಛಾಯಾಚಿತ್ರಗಳನ್ನ ಟಿಆರ್‌ಎಫ್‌ ತನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಕಟಿಸಿದ್ದು, ಈ ಕೃತ್ಯವನ್ನ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಬೆಂಬಲ ಇಲ್ಲದೇ ಮಾಡಲು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ. ಅಲ್ಲದೇ ಟಿಆರ್‌ಎಫ್‌ನ ಕಾರ್ಯತಂತ್ರದ ಬಗ್ಗೆಯೂ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ.

ಸಂಘಟನೆಯು ದಾಳಿಯ ಫೋಟೊಗಳನ್ನು ಪ್ರಕಟಿಸುವ ಮೂಲಕ ತನ್ನ ಉಪಸ್ಥಿತಿಯನ್ನ ಖಚಿತಪಡಿಸಲ ಮತ್ತು ಭಯದ ವಾತಾವರಣ ಸೃಷ್ಟಿಸಲು ಯತ್ನಿಸಿದೆ. ಈ ದಾಳಿಯ ಜವಾಬ್ದಾರಿಯನ್ನ ಎರಡು ಬಾರಿ ಹೇಳಿಕೊಂಡಿರುವುದು, ಸಂಘಟನೆಯ ಉದ್ದೇಶಿತ ಯೋಜನೆಯ ಭಾಗವಾಗಿದೆ ಎಂಬ ಅಂಶವನ್ನು ಯುಎನ್‌ಎಸ್‌ಸಿ ಗಮನಿಸಿದೆ. ಇದರೊಂದಿಗೆ ಟಿಆರ್‌ಎಫ್‌ನ ಈ ಕೃತ್ಯವು ಸ್ಥಳೀಯ ಜನತೆ ಮತ್ತು ಪ್ರವಾಸಿಗರಲ್ಲಿ ಭಯ ಹುಟ್ಟಿಸುವ ಉದ್ದೇಶ ಹೊಂದಿತ್ತು ಎಂಬುದು ಸ್ಪಷ್ಟವಾಗಿದೆ ಎಂಬುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!