ಉದಯವಾಹಿನಿ, ಸಂಕಷ್ಟಕರ ಗಣಪತಿ’ ‘ಫ್ಯಾಮಿಲಿ ಪ್ಯಾಕ್’ ‘ಅಬ್ಬಬ್ಬ!’ ಖ್ಯಾತಿಯ ಲಿಖಿತ್ ಶೆಟ್ಟಿ ಅಭಿನಯದ ‘ಫುಲ್ ಮೀಲ್ಸ್’ ಚಿತ್ರ ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಾಯಕ ನಟ ಲಿಖಿತ್ ಶೆಟ್ಟಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಒಂದು ಸಮಯದಲ್ಲಿ ಉದಯ ಮ್ಯೂಸಿಕ್ ನಲ್ಲಿ ಜನಪ್ರಿಯ ನಿರೂಪಕರಾಗಿದ್ದ ಲಿಖಿತ್ ಶೆಟ್ಟಿ ಈ ಹಿಂದೆ ಸಂಕಷ್ಟಕರ ಗಣಪತಿ, ಪುನೀತ್ ರಾಜ್ ಕುಮಾರ್ ಅವರ ಪಿ. ಆರ್. ಕೆ ಪ್ರೊಡಕ್ಷನ್ ನಲ್ಲಿ ಮೂಡಿಬಂದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ನಾಯಕ ನಟರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಕಳೆದ ವರ್ಷ ತೆರೆಕಂಡ ಕೆ. ಎಮ್. ಚೈತನ್ಯ ನಿರ್ದೇಶನದ ಅಬ್ಬಬ್ಬ ಚಿತ್ರದಲ್ಲಿ ಕೂಡ ನಾಯಕನಾಗಿ ಗಮನ ಸೆಳೆದಿದ್ದರು.

ಫುಲ್ ಮೀಲ್ಸ್’ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ತೊಡಗಿಸಿಕೊಂಡಿರುವ ಲಿಖಿತ್ ಶೆಟ್ಟಿ ತಮ್ಮ ಹಿಂದಿನ ಸಿನೆಮಾಗಳಿಗಿಂತ ಹೆಚ್ಚಿನ ಯಶಸ್ಸನ್ನು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದು, ಸಿನೆಮಾ ಚೆನ್ನಾಗಿ ಮೂಡಿ ಬಂದಿದೆ ಎಂಬ ಖುಷಿಯಲ್ಲಿ ಚಿತ್ರತಂಡವಿದೆ, ಚಿತ್ರದ ಪ್ರಚಾರ ಕಾರ್ಯದ ಮೊದಲ ಹಂತವಾಗಿ, ನಾಯಕ ಲಿಖಿತ್ ಶೆಟ್ಟಿ ಹುಟ್ಟು ಹಬ್ಬದ ದಿನ ಪೋಸ್ಟರ್ ಜೊತೆ, ಸಿನೆಮಾ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಮುಂದಿನ ಹಂತಗಳಲ್ಲಿ ಚಿತ್ರದ ಹಾಡು ಮತ್ತು ಟ್ರೈಲರ್ ಬಿಡುಗಡೆಯೊಂದಿಗೆ ಮತ್ತಷ್ಟು ಪ್ರಚಾರ ಮಾಡುತ್ತಾ ನವೆಂಬರ್ ಇಪ್ಪತ್ತೊಂದಕ್ಕೆ ‘ಫುಲ್ ಮೀಲ್ಸ್’ ಸವಿಯಲು ಜನರನ್ನು ಚಿತ್ರಮಂದಿರದತ್ತ ಬರುವಂತೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!