ಉದಯವಾಹಿನಿ, ನಟಿ ಭಾವನಾ ರಾಮಣ್ಣ ಅಮ್ಮನಾಗುತ್ತಿರುವ ಸಂತಸದಲ್ಲಿದ್ದಾರೆ. ಇದೀಗ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು ಸೀಮಂತ ಶಾಸ್ತ್ರ ನಡೆದಿದೆ. ಅವರ ನಿವಾಸದಲ್ಲೇ ಸೀಮಂತ ನಡೆದಿದ್ದು ಆಪ್ತರನ್ನಷ್ಟೇ ಆಹ್ವಾನಿಸಿದ್ದರು. ಐವಿಎಫ್ ಮೂಲಕ ಗರ್ಭಿಣಿಯಾಗಿರುವ ಭಾವನಾ ಅವಳಿ ಮಕ್ಕಳಿಗೆ ಶೀಘ್ರದಲ್ಲೇ ಜನ್ಮ ನೀಡಲಿದ್ದಾರೆ. ಸೀಮಂತಕ್ಕೆ ಭವನಾ ಹಸಿರು ಬಣ್ಣದ ಸೀರೆ ಧರಿಸಿದ್ದರು.
ಈ ಕಾರ್ಯಕ್ರಮಕ್ಕೆ ಸಿನಿಮಾ ಉದ್ಯಮದ ಕೆಲವೇ ಆಪ್ತರು, ಕುಟುಂಬಸ್ಥರು ಹಾಗೂ ಸ್ನೇಹಿತೆಯರನ್ನು ಮಾತ್ರ ಭಾವನಾ ಆಹ್ವಾನಿಸಿದ್ದರು. ಸರಳವಾಗಿ ನಡೆದರೂ ಸಂಪ್ರದಾಯದ ಪ್ರಕಾರ ಸೀಮಂತ ನಡೆದಿದೆ. ಮತ್ತೈದೆಯರು ಭಾವನಾಗೆ ಮಡಿಲು ತುಂಬುವ ಶಾಸ್ತ್ರ ಮಾಡಿ ಸಿಹಿ ತಿನ್ನಿಸಿದ್ದಾರೆ. ಹಳದಿ ಮಿಶ್ರಿತ ಹೂವಿಂದ ಅಲಂಕೃತ ಜಾಗದ ಮುಂದೆ ಭಾವನಾ ಕುಳಿತು ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ತುಂಬು ಗರ್ಭಿಣಿಯ ನಿವಾಸದ ಸಿಂಗಾರದಲ್ಲಿ ವೀಣಾ ಸಮೇತ ಶಾರದಾದೇವಿಯ ವಿಗ್ರಹ ಸೊಗಸಾಗಿ ಗೋಚರಿಸುತ್ತಿದೆ.

 

Leave a Reply

Your email address will not be published. Required fields are marked *

error: Content is protected !!