ಉದಯವಾಹಿನಿ,ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ 9ನೇ ಯೋಗ ಎಂಬುದು ಕೇವಲ ವ್ಯಾಯಾಮವಲ್ಲ, ಜೀವನ ವಿಧಾನ. ಯೋಗ ಅಂದರೆ ಏಕತೆ, ಮಾನವೀಯತೆ. ಯೋಗದ ಶಕ್ತಿ ನಮ್ಮನ್ನು ಆರೋಗ್ಯವಾಗಿರಿಸುವುದಷ್ಟೇ ಅಲ್ಲ, ಸ್ವಸ್ಥವಾಗಿರಿಸುವುದಾಗಿದೆ. ನಿಜವಾಗಿಯೂ ಇಂದು ಯೋಗ ಜಾಗತಿಕವಾಗಿ ಪ್ರಖ್ಯಾತಿಯಾಗಿದೆ. ಯೋಗ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಸರ್ವೇ ಭವಂತು ಸುಖಿನಃ. ಸರ್ವೇ ಸಂತು ನಿರಾಮಯಃ. ಎಲ್ಲರೂ ಸುಖವಾಗಿ, ಆರೋಗ್ಯವಾಗಿ ಇರುವಂತಾಗಲಿ ಎಂದು ಪ್ರಧಾನಿ ಮೋದಿ ಹೇಳಿದರು.ಯೋಗದ ಅರ್ಥ ಜೋಡಿಸುವುದು ಎಂದಾಗಿದೆ. 9 ವರ್ಷಗಳ ಹಿಂದೆ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಕರೆ ನೀಡಿದ್ದೆ. ಅಂದಿನ ನೆನಪುಗಳು ಇಂದು ಮರುಕಳಿಸಿವೆ. ಯೋಗ ಭಾರತದಿಂದ ವಿಶ್ವಕ್ಕೆ ಪಸರಿಸಿದೆ.
ಇದಕ್ಕೆ ಪೇಟೆಂಟ್ ಇಲ್ಲ, ಹಕ್ಕುಸ್ವಾಮ್ಯ ಇಲ್ಲ. ಎಲ್ಲರೂ ಅಳವಡಿಸಿಕೊಳ್ಳಬಹುದು. ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಸೇರಿದಂತೆ ಎಲ್ಲಿ ಬೇಕಾದರೂ ಮಾಡಬಹುದು. ಒಬ್ಬಂಟಿಯಾಗಿ, ತಂಡವಾಗಿ ಯೋಗಾಭ್ಯಾಸ ಮಾಡಬಹುದು ಎಂದು ಮೋದಿ ಹೇಳಿದರು.9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದಕ್ಕಾಗಿ ನೀವೆಲ್ಲ ಇಲ್ಲಿಗೆ ಬಂದಿದ್ದೀರಿ. ಬಹು ದೂರದಿಂದ ಸೂರ್ಯೋದಯದ ವೇಳೆಗೇ ಇಲ್ಲಿಗೆ ಆಗಮಿಸಿದ್ದೀರಿ. ಯೋಗ ಅಂದರೆ ಒಗ್ಗಟ್ಟು. ಯೋಗದಿಂದಾಗಿ ನಾವೆಲ್ಲ ಇಲ್ಲಿ ಒಂದುಗೂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.ಇಂದಿನ ಆಚರಣೆಯು ನಿಜಕ್ಕೂ ಬಹಳ ವಿಶೇಷವಾಗಿದೆ. ಏಕೆಂದರೆ ಇಲ್ಲಿ ಪ್ರಧಾನಿ ಮೋದಿಯವರು ನಮ್ಮನ್ನು ಮುನ್ನಡೆಸಿ ಯೋಗಾಭ್ಯಾಸ ಮಾಡಿಸಲಿದ್ದಾರೆ. ಅವರ ನೇತೃತ್ವದಲ್ಲಿ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗದಿನ ಎಂದು ಘೋಷಿಸಲಾಯಿತು ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ರುಚಿರ ಕಾಂಬೋಜ್ ಹೇಳಿದ್ದಾರೆ.ನಾನು ಇಲ್ಲಿರುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ಸಾವಿರಾರು ಜನ ಇಲ್ಲಿದ್ದಾರೆ. ನಾನು ಇಂದು ಪ್ರಧಾನಿ ಮೋದಿ ಅವರನ್ನು ಹಿಂಬಾಲಿಸಿಕೊಂಡು ಯೋಗ ಮಾಡುತ್ತೇನೆ. ಈ ಬಾರಿ ಇದು ನಿಜವಾಗಿಯೂ ಅದ್ಭುತವಾಗಲಿದೆ ಎಂದು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್ ನ್ಯೂಯಾರ್ಕ್ನಲ್ಲಿ ಹೇಳಿದ್ದಾರೆ. ಅವರು ವಿಶ್ವಸಂಸ್ಥೆ ಆವರಣದಲ್ಲಿ ನಡೆಯುವ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ.
