ಉದಯವಾಹಿನಿ,ನವದೆಹಲಿ: ಜುಲೈ, 1ರಿಂದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಪಡಿತರ ಚೀಟಿದಾರರಿಗೆ ನೀಡುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು. ಆದ್ರೇ ಜುಲೈ,1ರಂದು ಉಚಿತವಾಗಿ 10 ಕೆಜಿ ವಿತರಣೆ ಮಾಡುವುದು ಅನುಮಾನ ಎಂಬುದಾಗಿ ಸ್ವತಹ ಸಿಎಂ ಸಿದ್ಧರಾಮಯ್ಯ ಬಹಿರಂಗ ಪಡಿಸಿದ್ದಾರೆ. ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಸರ್ಕಾರದಿಂದ ಜುಲೈ,1ರಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಹೇಳಲಾಗುತ್ತು. ಆದ್ರೇ ಈ ಯೋಜನೆ ಸ್ವಲ್ಪ ವಿಳಂಬವಾಗಬಹುದು ಎಂದರು. ಕೇಂದ್ರದ ರಾಜಕೀಯದಿಂದ ಅಕ್ಕಿ ಹೊಂದಿಸಿಕೊಳ್ಳುವುದಕ್ಕೆ ತಡವಾಗುತ್ತಿದೆ.
ರಾಜ್ಯ ಸರ್ಕಾರ ಅನ್ನಭಾಗ್ಯ ಉಚಿತ 10 ಕೆಜಿ ಅಕ್ಕಿ ವಿತರಣೆ ಯೋಜನೆಗೆ ಅಕ್ಕಿ ಹೊಂದಿಸಿಕೊಳ್ಳುವ ಪ್ರಕ್ರಿಯಿಯನ್ನು ನಡೆಸಲಾಗುತ್ತಿದೆ ಎಂದರು. ಬೇರೆ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಕೇಳಿದ್ದೇವೆ. ಆ ರಾಜ್ಯಗಳಲ್ಲಿ ಅಕ್ಕಿ ಲಭ್ಯತೆಯನ್ನು ನೋಡಿಕೊಂಡು ಯೋಜನೆ ಜಾರಿಗೆ ಮಾಡಲಿದ್ದೇವೆ. ನಾಳೆ ಕೇಂದ್ರ ಭಂಡಾರ, ನಫೆಡ್ ಸೇರಿದಂತೆ 3 ಸಂಸ್ಥೆಗಳ ಜೊತೆ ಕೊಟೇಷನ್ ಕೂಡ ಕೇಳಿದ್ದೇವೆ. ನಾಳೆ ಸಿಗಲಿದ್ದೂ, ಆ ಮುಂದೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
