ಉದಯವಾಹಿನಿ, ಬೆಂಗಳೂರು : ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ರೇವಣ್ಣನ ಜೀವನಶೈಲಿ ಇನ್ನುಮುಂದೆ ಜೈಲಿನಲ್ಲಿ ಬದಲಾಗಿದ್ದು ಸಜಾಬಂಧಿ ಖೈದಿಯಾಗಿ ಅವರನ್ನು ಪರಿಗಣಿಸಲಾಗುತ್ತದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆಜೀವ ಜೈಲು ಶಿಕ್ಷೆಗೆ ಗುರಿಯಾದ ಪ್ರಜ್ವಲ್‌ರೇವಣ್ಣ ಅವರನ್ನು ನಿನ್ನೆ ನ್ಯಾಯಾಲಯದಿಂದ ನೇರವಾಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರಿಗೆ ಜೈಲು ಅಧಿಕಾರಿಗಳು ಖೈದಿ ನಂಬರ್ ನೀಡಿದ್ದಾರೆ.ಪ್ರಜ್ವಲ್‌ರೇವಣ್ಣ ಅವರ ಖೈದಿ ನಂಬರ್ ೧೫೫೨೮ ಆಗಿದ್ದು, ಇಂದಿನಿಂದ ಅವರು ಜೈಲಿನಲ್ಲಿ ಸಜಾಬಂಧಿ ಖೈದಿಗಳಿಗೆ ನೀಡುವ ಬಿಳಿ ವಸ್ತ್ರವನ್ನು ಧರಿಸಿ ಜೈಲು ನಿಯಮಾವಳಿ ಅನುಸಾರ ಜೈಲಿನ ಅಧೀಕ್ಷಕರು ನೀಡುವ ಕೆಲಸ ಮಾಡಬೇಕು.ಜೈಲಿನಲ್ಲಿ ಇದುವರೆಗೂ ಪ್ರತ್ಯೇಕ ಸೆಲ್‌ನಲ್ಲಿದ್ದ ಪ್ರಜ್ವಲ್‌ರೇವಣ್ಣ ಅವರನ್ನು ಇಂದು ಸಜಾಬಂಧಿ ಖೈದಿಗಳ ಬ್ಯಾರಕ್‌ಗೆ ವರ್ಗಾವಣೆ ಮಾಡಲಾಗಿದೆ. ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ರೇವಣ್ಣ ನಿಯಮಗಳಂತೆ ಜೈಲಿನ ಒಳಗೆ ೮ ಗಂಟೆ ಕೆಲಸ ಮಾಡಬೇಕು. ಜತೆಗೆ ಸಜಾಬಂಧಿ ಖೈದಿಗಳ ನಿಯಮವನ್ನು ಪಾಲಿಸಬೇಕು.ಜೈಲಿನ ಒಳಗೆ ಪ್ರಜ್ವಲ್‌ರೇವಣ್ಣ ಅವರಿಗೆ ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಕರಕುಶಲ ಕೆಲಸ ಸೇರಿದಂತೆ ಯಾವುದಾದರೊಂದು ಕೆಲಸವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಪ್ರಜ್ವಲ್‌ರೇವಣ್ಣ ಅವರಿಗೆ ಆಯ್ಕೆಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ನೀಡಲಾಗುತ್ತದೆ.ಮೊದಲು ೧ ವರ್ಷ ಕೌಶಲ್ಯರಹಿತ ಎಂದು ೫೨೪ ರೂ. ಸಂಬಳ ನೀಡಲಾಗುತ್ತೆ. ಆಮೇಲೆ ಅರೆಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತದೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತೆ.

Leave a Reply

Your email address will not be published. Required fields are marked *

error: Content is protected !!