ಉದಯವಾಹಿನಿ, ರಾಂಚಿ : ಮಳೆಗಾಲದಲ್ಲಿ ಹಾವುಗಳು ಬಿಲಗಳಿಂದ ಹೊರಬರುವುದು ಸಹಜ. ಬೆಚ್ಚಗಿನ ವಾತಾವರಣ ಹುಡುಕಿಕೊಂಡು ಅವು ಜನವಸತಿ ಪ್ರದೇಶಗಳತ್ತ ಬರುತ್ತವೆ. ತೇವಯುಕ್ತ ವಾತಾವರಣದಿಂದಾಗಿ ಬಿಲಗಳಿಂದ ಹೊರಬರುವ ಹಾವುಗಳು ಮನೆ, ಶಾಲೆ ಮತ್ತು ಆಸ್ಪತ್ರೆ, ಕಚೇರಿಯಂತಹ ಜನವಸತಿ ಪ್ರದೇಶಗಳಲ್ಲಿ ಸೇರಿಕೊಳ್ಳುತ್ತವೆ. ದೇಹದ ಉಷ್ಣತೆಯನ್ನು ಸರಿದೂಗಿಸಲು ಬೈಕ್‌ನೊಳಗೆ, ಶೂಗಳ ಒಳಗೆ ಅಡಗಿಕೊಳ್ಳುವ ಹಾವುಗಳನ್ನು ಕಂಡ ಎಷ್ಟೋ ಜನ ಭಯದಿಂದ ಅವುಗಳನ್ನು ಹೊಡೆದು ಕೊಲ್ಲುವುದುಂಟು. ಆದರೆ, ಅಂತಹ ಕೆಲಸಕ್ಕೆ ಮುಂದಾಗಬೇಡಿ ಎನ್ನುತ್ತಾರೆ ರಾಂಚಿಯ ಉರಗಪ್ರೇಮಿ ರಮೇಶ್ ಕುಮಾರ್ ಮಹಾತೋ.

ಕಳೆದ 20 ವರ್ಷಗಳಿಂದ ಹಾವುಗಳ ಬಗ್ಗೆ ಜನರಲ್ಲಿರುವ ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ಹೊಡೆದೋಡಿಸುವ ಮೂಲಕ ಹಾಗೂ ಅವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಬಿಡುವ ಮೂಲಕ ಗಮನ ಸೆಳೆಯುತ್ತಿರುವ ಉರಗಪ್ರೇಮಿ ರಮೇಶ್ ಕುಮಾರ್, ಹಾವುಗಳು ಮನೆಗೇಕೆ ಬರುತ್ತವೆ, ಯಾವ ಜಾತಿಯ ಹಾವು ಎಷ್ಟು ವಿಷಕಾರಿ, ಹಾವುಗಳನ್ನು ಹಿಡಿಯುವುದು ಹೇಗೆ, ತಾವು ಹಾವುಗಳನ್ನು ಹಿಡಿಯುವ ವಿಧಾನ ಹೇಗಿರುತ್ತದೆ, ಇಲ್ಲಿಯವರೆಗೆ ಎಷ್ಟು ಹಾವುಗಳನ್ನು ಹಿಡಿಯಲಾಗಿದೆ ಎಂಬ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!