ಉದಯವಾಹಿನಿ, ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಚಳ್ಳಕೆರೆ ತಾಲೂಕಿನ ವಿವಿಧೆಡೆ ಜಮೀನುಗಳು ಜಲಾವೃತಗೊಂಡಿವೆ. ಭಾರೀ ಮಳೆಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯ ರೈತ ಮಧು ಎಂಬವರ ಜಮೀನು ಜಲಾವೃತಗೊಂಡಿದೆ. ಅಡಿಕೆ, ತೆಂಗು, ಮೆಕ್ಕೆಜೋಳ, ತರಕಾರಿ ಬೆಳೆಗಳು ಜಲಾವೃತಗೊಂಡಿದ್ದು, ನಾಲ್ಕು ಎಕರೆಗೂ ಹೆಚ್ಚು ಜಮೀನು ಜಲಮಯವಾಗಿದೆ.
ಇನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರೈತ ದಯಾನಂದ ಎಂಬವರಿಗೆ ಸೇರಿದ ಐದು ಎಕರೆ ಮೆಕ್ಕೆಜೋಳ ಜಮೀನು ಕೂಡ ಜಲಾವೃತವಾಗಿದೆ. ಕೈಗೆ ಬಂದಿದ್ದ ಬೆಳೆ ಮಳೆರಾಯನ ಅವಕೃಪೆಯಿಂದ ಹಾನಿಯಾಗಿದೆ. ಅತಿವೃಷ್ಟಿಯಿಂದ ಚಳ್ಳಕೆರೆ ಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ.
