ಉದಯವಾಹಿನಿ, ನವದೆಹಲಿ: ಬಿಹಾರ ಚುನಾವಣೆ ಹೊತ್ತಿನಲ್ಲೇ ಕೇಂದ್ರ ಚುನಾವಣಾ ಆಯೋಗ ಮಹತ್ವದ ಹೆಜ್ಜೆಯನ್ನಿಟ್ಟಿದೆ.2019ರಿಂದ ಈಚೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಮಾನದಂಡ ಪೂರೈಸಲು ವಿಫಲವಾದ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಶನಿವಾರ ತಿಳಿಸಿದೆ. 2019ರಿಂದ ಈಚೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಮಾನದಂಡ ಪೂರೈಸಲು ವಿಫಲವಾದ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಶನಿವಾರ ತಿಳಿಸಿದೆ.
ಹೌದು. ಈ ಪಕ್ಷಗಳು ಕಳೆದ 6 ವರ್ಷಗಳಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಹಾಗೂ ಭೌತಿಕವಾಗಿ ಎಲ್ಲಿಯೂ ಕಚೇರಿಗಳನ್ನು ತೆರೆದಿಲ್ಲ ಎಂದು ಆಯೋಗ ಹೇಳಿದೆ. ಅಲ್ಲದೇ ಮಾನ್ಯತೆ ಪಡೆಯದ ಇಂತಹ ಇನ್ನೂ 2,520 ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಸದ್ಯ 6 ರಾಷ್ಟ್ರೀಯ ಪಕ್ಷಗಳು ಮತ್ತು 67 ಪ್ರಾದೇಶಿಕ ಪಕ್ಷಗಳು ದೇಶದಲ್ಲಿವೆ ಎಂದು ಆಯೋಗ ತಿಳಿಸಿದೆ.
