ಉದಯವಾಹಿನಿ, ಬೀಜಿಂಗ್‌: ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗೆ ಚೀನಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.ಇದೇ ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 1ರ ವರೆಗೆ ಟಿಯಾಂಜಿನ್‌ನಲ್ಲಿ ಶೃಂಗ ಸಭೆ ನಡೆಯಲಿದೆ. 2020ರಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಗಲ್ವಾನ್‌ ಘರ್ಷಣೆ ಬಳಿಕ ಚೀನಾಕ್ಕೆ ಮೋದಿ (Narendra Modi) ಅವರ ಮೊದಲ ಭೇಟಿ ಇದಾಗಲಿದೆ. ಟ್ರಂಪ್‌ ಸುಂಕ ಸಮರದ ನಡುವೆ ಬ್ರಿಕ್ಸ್‌ ಒಕ್ಕೂಟ ಭಾಗವಾಗಿರು ಚೀನಾ ಮೋದಿ ಅವರಿಗೆ ಆಹ್ವಾನ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಈ ಸಭೆಯು ಉಭಯ ರಾಷ್ಟ್ರಗಳ ಅಭಿವೃದ್ಧಿಯ ಮಾತುಕತೆಗಳ ಮೇಲೆ ಕೇಂದ್ರೀಕೃತವಾಗಿದೆ. ಜೊತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಒಪ್ಪಂಗಳು ಆಗುವ ಸಾಧ್ಯತೆಯಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ. ಕಳೆದ ಜೂನ್‌ನಲ್ಲಿ ನಡೆದ ಶೃಂಗ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತವನ್ನು ಪ್ರತಿನಿಧಿಸಿದ್ದರು.

ಅಮೆರಿಕದಲ್ಲಿ ಆಂತರಿಕೆ ಭಿನ್ನಮತ ಸ್ಫೋಟ: ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ, ಅಮೆರಿಕದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಅಮೆರಿಕದ ಅನೇಕ ರಾಜಕಾರಣಿಗಳು, ಆರ್ಥಿಕ ತಜ್ಞರು ಕಿಡಿಕಾರಿದ್ದಾರೆ. ಅಮೆರಿಕ ಕಾಂಗ್ರೆಸ್‌ನ ಡೆಮಾಕ್ರೆಟಿಕ್ ಸದಸ್ಯ ಗ್ರೆಗೊರಿ ಮೀಕ್ಸ್ ಮಾತಾಡಿ, ಟ್ರಂಪ್ ಅನಗತ್ಯ ಸುಂಕಗಳು ಎರಡು ದೇಶಗಳ ನಡುವೆ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ನಡೆಸಿದ್ದ 2 ದಶಕಗಳ ಪ್ರಯತ್ನವನ್ನು ಅಪಾಯಕ್ಕೆ ಸಿಲುಕಿಸಿದೆ. ರಾಜತಾಂತ್ರಿಕ ಸಂಬಂಧ ಮೇಲೆ ಪರಿಣಾಮ ಬೀರಲಿದೆ ಅಂತ ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!