ಉದಯವಾಹಿನಿ, ಬೆಂಗಳೂರು: ಮೆಟ್ರೋ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ. ಕೇಂದ್ರ 50%, ರಾಜ್ಯ 50% ಖರ್ಚು ಮಾಡುವ ಒಪ್ಪಂದ ಆಗಿದೆ. ಆದ್ರೆ ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಎದುರೇ ಕ್ರೆಡಿಟ್ ಕ್ಲೈಮ್ ಮಾಡಿಕೊಂಡರು.ಐಐಐಟಿಯಲ್ಲಿ ನಮ್ಮ ಮೆಟ್ರೋದ ಕಿತ್ತಳೆ ಮಾರ್ಗಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತಮಾಡಿದ ಸಿಎಂ ಮೋದಿ ಎದುರೇ ಕ್ರೆಡಿಟ್ ತೆಗೆದುಕೊಂಡರು.
ಮೋದಿಯವ್ರು ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮೆಟ್ರೋ ಕೇಂದ್ರ ರಾಜ್ಯಗಳ ಸಹಯೋಗದೊಂದಿಗೆ ನಡೆಯುವ ಯೋಜನೆ. ಈ ಯೋಜನೆಗೆ ಕೇಂದ್ರ 50%, ರಾಜ್ಯ 50% ಖರ್ಚು ಮಾಡುವ ಒಪ್ಪಂದ ಆಗಿದೆ. ಆದ್ರೆ ರಾಜ್ಯ ಸರ್ಕಾರವೇ ಹೆಚ್ಚು ಕರ್ಚು ಮಾಡ್ತಿದೆ, ಕೇಂದ್ರ ತಾಂತ್ರಿಕ ಮತ್ತು ಹಣಕಾಸು ನೆರವು ಕೊಡ್ತಿದೆ. ಹಾಗಾಗಿ ಇದು ಕೇಂದ್ರ, ರಾಜ್ಯಗಳ ಜಂಟಿ ಕಾರ್ಯಕ್ರಮ ಎಂದು ಹೇಳಿದರು.
ಈಗಾಗಲೇ 96.10 ಕಿಮೀ ಮೆಟ್ರೋ ರೈಲು ಕೆಲಸ ಮುಗಿದಿದೆ. ಇದಕ್ಕೆ ರಾಜ್ಯ 25,387 ಕೋಟಿ ರೂ. ಖರ್ಚು ಮಾಡಿದೆ. ಕೇಂದ್ರ 7,468.86 ಕೋಟಿ ಖರ್ಚು ಮಾಡಿದೆ, ಹಳದಿ ಮಾರ್ಗಕ್ಕೆ 7,160 ಕೋಟಿ ಖರ್ಚಾಗಿದೆ ಎಂದು ಹೇಳಿದ ಸಿಎಂ ಮೋದಿ ಎದುರಲ್ಲೇ ಕ್ರೆಡಿಟ್ ಕ್ಲೈಮ್ ಮಾಡಿಕೊಂಡರು.
