ಉದಯವಾಹಿನಿ, ಬೆಂಗಳೂರು: ನಟ ವಿಜಯ್ ರಾಘವೇಂದ್ರ ಅವರು ಕನ್ನಡದ ಪ್ರಮುಖ‌ ನಟರಲ್ಲಿ ಒಬ್ಬರಾಗಿದ್ದಾರೆ. ಇವರ ಪತ್ನಿ ಸ್ಪಂದನ ಕೊನೆಯುಸಿರೆಳೆದು ಒಂದೂವರೆ ವರ್ಷ ಆಗಿದೆ. ಪ್ರಸ್ತುತ, ವಿಜಯ್ ರಾಘವೇಂದ್ರ ತಮ್ಮ ಮಗನನ್ನು ಒಂಟಿಯಾಗಿ ಬೆಳೆಸುತ್ತಿದ್ದಾರೆ. ಈ ನಡುವೆ ವಿಜಯ ರಾಘವೇಂದ್ರ ಹಾಗೂ ಮೇಘನಾ ರಾಜ್ ಇಬ್ಬರಿಗೂ ಎರಡನೇ ಮದುವೆ ಅನ್ನುವ ಗಾಸಿಪ್ ಸುದ್ದಿ ಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ಹರಡುತ್ತಲೆ ಇತ್ತು. ಆದರೆ, ಈ ಬಗ್ಗೆ ವಿಜಯ ರಾಘವೇಂದ್ರ ಆಗಲಿ, ಮೇಘನಾ ರಾಜ್ ಆಗಲಿ ಇಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ.‌. ಇದೀಗ ಸಂದರ್ಶನ ವೊಂದರಲ್ಲಿ ನಟ ವಿಜಯ್ ಸ್ಪಷ್ಟೀಕರಣ ನೀಡಿದ್ದು ಬೇಸರ ಕೂಡ ವ್ಯಕ್ತ ಪಡಿಸಿದ್ದಾರೆ.

ಸ್ಪಂದನಾ ಅವರು 2023ರ ಆಗಸ್ಟ್​ನಲ್ಲಿ ಥೈಲ್ಯಾಂಡ್​ನ ಬ್ಯಾಂಕಾಕ್​ನಲ್ಲಿ ನಿಧನ ಹೊಂದಿದರು. ಇದಾದ ಬಳಿಕ ವಿಜಯ್ ರಾಘವೇಂದ್ರ ಅವರ ಎರಡನೇ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಅದರಲ್ಲೂ ಮೇಘನಾ ರಾಜ್ ಜೊತೆ ಇಲ್ಲ ಸಲ್ಲದ ಗಾಸಿಪ್ ಸುದ್ದಿ ಹರಡಿಸಿ ಇವರಿಬ್ಬರೂ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಈ ವಿಚಾರಗಳ ಬಗ್ಗೆ ವಿಜಯ್ ರಾಘ ವೇಂದ್ರ ಅವರು ಒಲ್ಲದ ಮನಸ್ಸಿನಿಂದ ಸ್ಪಷ್ಟೀಕರಣ ನೀಡಿದ್ದಾರೆ.ವಿಜಯ್ ರಾಘವೇಂದ್ರ ತಮ್ಮ ಹೊಸ ಸಿನಿಮಾ ‘ರಿಪ್ಪನ್ ಸ್ವಾಮಿ’ಯ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈ ವೇಳೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ವಿಜಯ್ ರಾಘವೇಂದ್ರ ಬಳಿ ಮೇಘನಾ ರಾಜ್ ಅವ ರೊಂದಿಗೆ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ಕೇಳಿವೆ. ಈ ವೇಳೆ ಸ್ಪಷ್ಟವಾಗಿ ಮೇಘನಾ ಅವರೊಂದಿಗೆ ಮದುವೆ ಆಗುತ್ತಾರಾ? ಇಲ್ವಾ? ಅನ್ನೋದನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!