ಉದಯವಾಹಿನಿ, ಬೆಂಗಳೂರು: ಸೈಬರ್ ವಂಚನೆಯಿಂದ ಸರ್ಕಾರಿ ಅಧಿಕಾರಿಯೊಬ್ಬರು 45,000 ರೂ. ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ ಹೇಮಲತಾಗೆ ವಂಚನೆ ಎಸಗಲಾಗಿದೆ. ಆ.6ರಂದು ಅಧೀನ ಕಾರ್ಯದರ್ಶಿಗಳ ವಾಟ್ಸಾಪ್‌ನಿಂದ 45,000 ರೂ. ಅವಶ್ಯಕತೆ ಇದೆ ಎಂದು ಸಂದೇಶ ಬಂದಿದೆ. ಕೂಡಲೇ ಹೇಮಲತಾ ಸಂದೇಶದಲ್ಲಿದ್ದ ನಂಬರ್‌ಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು.
ಆದರೆ ಕರೆ ಮಾಡಿದಾಗ ಮೊಬೈಲ್ ನಂಬರ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ಸೋನುಕುಮಾರ್ ಎಂಬವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ವಂಚನೆ ಬಗ್ಗೆ ಕೇಸ್ ದಾಖಲಾಗಿದೆ.
