ಉದಯವಾಹಿನಿ, ಬೆಂಗಳೂರು: ಬನ್ನೇರುಘಟ್ಟ ಜೈವಿನ ಉದ್ಯಾನದಲ್ಲಿ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ಎರಡು ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿವೆ. ಹೊಸ ಅತಿಥಿಗಳ ಆಗಮನದಿಂದ ಪ್ರಾಣಿಪ್ರಿಯರಿಗೆ ಸಂತಸವಾಗಿದೆ. ಉದ್ಯಾನವನದಲ್ಲಿರುವ ಕೋಕಿಲ-ಭರತ್ ಮತ್ತು ಕಾವೇರಿ-ಭರತ್ ಎಂಬ ಜೀಬ್ರಾ ದಂಪತಿ ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಜೀಬ್ರಾಗಳ ಸಂಖ್ಯೆ ಇದೀಗ 9ಕ್ಕೆ ಏರಿಕೆಯಾಗಿದೆ. ಸದ್ಯ ಉದ್ಯಾನವನದಲ್ಲಿರುವ ಜೀಬ್ರಾಗಳಲ್ಲಿ ಹೆಣ್ಣು ಜೀಬ್ರಾಗಳೇ ಹೆಚ್ಚು ಇದ್ದು, ಹೊಸ ಮರಿಗಳ ಆರೋಗ್ಯದ ಮೇಲೂ ಸಿಬ್ಬಂದಿ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಮರಿಗಳು ಆರೋಗ್ಯವಾಗಿದ್ದು, ತಾಯಿ ಜೀಬ್ರಾಗಳ ಜೊತೆಗೆ ಸುರಕ್ಷಿತವಾಗಿ ಇರಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಕೆಲವು ಜೀಬ್ರಾಗಳನ್ನು ಇತರ ಉದ್ಯಾನವನಗಳಿಗೆ ನೀಡುವ ಮೂಲಕ ಬೇರೆ ಅಪರೂಪದ ಪ್ರಾಣಿಗಳನ್ನು ತರಲು ಕೂಡ ಚಿಂತನೆ ನಡೆಸಲಾಗಿದೆ.
