ಉದಯವಾಹಿನಿ, ದೊಡ್ಡಬಳ್ಳಾಪುರ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾಗಿ ರೀಲ್ಸ್ ಮಾಡುತ್ತಿದ್ದ, ಮಂಜಣ್ಣ ಅಂತಾನೇ ಕರೆಸಿಕೊಳ್ಳುವ ಮಂಜು ಬೈಕ್​ನಲ್ಲಿ ತ್ರಿಬಲ್ ರೈಡ್ ಮಾಡಿದ ತಪ್ಪಿಗೆ ಫೈನ್ ಕಟ್ಟಿದ್ದಾರೆ. ದೊಡ್ಡಬಳ್ಳಾಪುರದ ಈ ಮಂಜುನಾಥ್ ರೀಲ್ಸ್ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾಗಿದ್ದಾರೆ, ಬನ್ರೋ ಎನ್ನುವ ಮೂಲಕ ಪ್ರಸಿದ್ದಿರಾಗಿದ್ದಾರೆ. ಇದೇ ಒಂದು ರೀಲ್ಸ್ ವಿಡಿಯೋ ಮಾಡಿದ್ದಕ್ಕಾಗಿ ಪೊಲೀಸರು ಫೈನ್ ಹಾಕಿದ್ದಾರೆ.

ರೀಲ್ಸ್ ಮಾಡುವ ಇಬ್ಬರು ಮಹಿಳೆಯರ ಜೊತೆಯಲ್ಲಿ ಬೈಕ್ ರೈಡಿಂಗ್ ಮಾಡಿದ ವಿಡಿಯೋವನ್ನ ಹಂಚಿಕೊಂಡಿದ್ದರು, ಸಂಚಾರಿ ನಿಯಮ ಉಲ್ಲಂಘನೆ ಮಾಡಿ ತ್ರಿಬಲ್ ರೈಡಿಂಗ್ ಜೊತೆಗೆ, ಹೆಲ್ಮೆಟ್ ಧರಿಸದೇ ಇರುವುದು ಪೊಲೀಸರ ಗಮನಕ್ಕೆ ಬಂದಿದೆ, ರೀಲ್ಸ್ ಮಂಜನನ್ನ ಪತ್ತೆ ಮಾಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಠಾಣೆಗೆ ಕರೆತಂದು ಫೈನ್ ಹಾಕಿ ಕಳುಹಿಸಿದ್ದಾರೆ. ಫೈನ್ ಕಟ್ಟಿದ ನಂತರ ಮಂಜಣ್ಣನಿಗೆ ಜ್ಞಾನೋದಯವಾಗಿದೆ. ಹೆಲ್ಮೆಟ್ ಹಾಕದೇ ತ್ರಿಬಲ್ ರೈಡಿಂಗ್ ಮಾಡಿದ್ದು ನನ್ನ ತಪ್ಪು, ಮನೆಯಲ್ಲಿ ನಮ್ಮನ್ನೇ ನಂಬಿರುವ ಜನರಿದ್ದಾರೆ, ಸುರಕ್ಷಿತ ಚಾಲನೆಗೆ ಹೆಲ್ಮೆಟ್ ಧರಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!