ಉದಯವಾಹಿನಿ, ವಾಷಿಂಗ್ಟನ್: ಟೈಟಾನಿಕ್ ಎಂಬ ಹೆಸರು ಕೇಳಿದರೆ ಮೈನವಿರೇಳುತ್ತದೆ. 1912ರಲ್ಲಿ ತನ್ನ ಮೊದಲ ಸಮುದ್ರಯಾನ ಆರಂಭಿಸಿದ್ದ ಟೈಟಾನಿಕ್ ಹಡಗು ನಡುಭಾಗದಲ್ಲಿದ್ದ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಭಯಾನಕ ಅಪಘಾತಕ್ಕೀಡಾಗಿತ್ತು. 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಅದರ ಮೊದಲ ಅವಶೇಷ ಪತ್ತೆಯಾಗಿದ್ದು 1985ರಲ್ಲಿ. ಅದರಿಂದ ಸ್ಫೂರ್ತಿ ಪಡೆದು ಬಂದಿದ್ದೇ ಟೈಟಾನಿಕ್ ಸಿನಿಮಾ. ಸಮುದ್ರದ ತಳಭಾಗ ಸೇರಿರುವ ಟೈಟಾನಿಕ್‌ನಲ್ಲಿನ ಅನೇಕ ವಸ್ತುಗಳನ್ನು ಹೊರಗೆ ತಂದಿದ್ದರೂ, ಮೂಲ ಹಡಗಿನ ಅವಶೇಷಗಳು ಅಲ್ಲಿಯೇ ಉಳಿದಿವೆ. ಈ ಭವ್ಯ ಹಡಗು ಈಗಲೂ ಅಚ್ಚರಿ ಹಾಗೂ ಕುತೂಹಲದ ಸಂಗತಿ.
ಟೈಟಾನಿಕ್ ಸಿನಿಮಾ ಸೃಷ್ಟಿಕರ್ತ ಜೇಮ್ಸ್ ಕ್ಯಾಮರಾನ್ ಕೂಡ ಸಬ್‌ಮೆರಿನ್‌ನಲ್ಲಿ ತೆರಳಿ ಅದನ್ನು ವೀಕ್ಷಿಸಿದ್ದರು. ವಿಪರೀತವಾದ ಆಂತರಿಕ ಒತ್ತಡದ ಪರಿಣಾಮ ರಚನೆ ಅಥವಾ ಹಡಗು ಕುಸಿಯುವ ಅಥವಾ ವಿಫಲವಾಗುವ ಸನ್ನಿವೇಶವನ್ನು ಅಂತಃಸ್ಫೋಟ ಅಥವಾ ಒಳಸಿಡಿತದ ಮಹಾದುರಂತ ಎಂದು ಕರೆಯಲಾಗುತ್ತದೆ. ಒಂದು ಮುಚ್ಚಿದ ಸ್ಥಳದ ಒಳಭಾಗದಲ್ಲಿನ ಒತ್ತಡವು, ಆ ರಚನೆಗೆ ಸಹಿಸಿಕೊಳ್ಳಲಾರದಷ್ಟು ತೀವ್ರವಾದಾಗ ಅದು ಹಠಾತ್ ಹಾಗೂ ಬಲಯುತವಾದ ಪರಿಣಾಮವನ್ನು ಎದುರಿಸುತ್ತದೆ. ಇದು ಕುಸಿತದ ಮಹಾವಿಪ್ಲವಕ್ಕೆ ಎಡೆಮಾಡಿಕೊಡುತ್ತದೆ. ಸ್ವತಃ ಸಬ್‌ಮೆರಿನ್ ಚಾಲನೆ ಮಾಡಲು ತೆರಳಿದ್ದ ಸ್ಟಾಕ್‌ಟಾನ್ ರಷ್ ಸೇರಿದಂತೆ ಐವರು ಜಲಸಮಾಧಿಯಾಗಿದ್ದಾರೆ.
