ಉದಯವಾಹಿನಿ, ಬೆಳಗಾವಿ: ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ಭಾರೀ ಮಳೆ ಸುರಿದಿದೆ. ವರುಣನ ಅಬ್ಬರದಿಂದ ಪ್ರಸಿದ್ಧ ಯಲ್ಲಮ್ಮ ಗುಡ್ಡದಲ್ಲಿ ಅವಾಂತರ ಸೃಷ್ಟಿಯಾಗಿದೆ. ದೇವಸ್ಥಾನದ ಗರ್ಭಗುಡಿ ಸೇರಿ ಆವರಣದವರೆಗೂ ಮೂರು ಅಡಿ ಎತ್ತರದ ಮಳೆನೀರು ನಿಂತು ಜಲಾವೃತ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ, ಗರ್ಭಗುಡಿಯಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಯೊಳಗೂ ಮಳೆನೀರು ನುಗ್ಗಿ, ಒಳಗಿದ್ದ ದೇಣಿಗೆ ನೋಟುಗಳನ್ನು ಸಂಪೂರ್ಣ ಒದ್ದೆಯಾಗಿವೆ. ಹೀಗಾಗಿ ದೇವಸ್ಥಾನದ ಸಿಬ್ಬಂದಿ ತುರ್ತು ಕ್ರಮವಾಗಿ ಹುಂಡಿಯನ್ನು ತೆರೆಯುವ ಮೂಲಕ ಹಣವನ್ನು ಹೊರತೆಗೆದಿದ್ದಾರೆ. ನೀರಿನಲ್ಲಿ ನೆನೆದ ನೋಟುಗಳು ನೀರಿನಲ್ಲಿ ನೆನೆದ ನೋಟುಗಳು ಹುಂಡಿಯೊಳಗೆ ಇಡಲಾಗಿದ್ದ ಕುಂಕುಮ ಮತ್ತು ಅರಿಶಿನದಿಂದ ಕೆಂಪು-ಹಳದಿ ಬಣ್ಣದಿಂದ ಪಡೆದಿವೆ. ನೋಟುಗಳನ್ನು ಹಾನಿಯಾಗದಂತೆ ಉಳಿಸಲು, ದೇವಸ್ಥಾನದ ಆವರಣದಲ್ಲೇ ಹರಡಿ ಒಣಗಿಸಲಾಯಿತು. ನೋಟುಗಳ ರಾಶಿ ಆವರಣದಲ್ಲಿ ಹರಡಿರುವ ದೃಶ್ಯ ಭಕ್ತರ ಗಮನ ಸೆಳೆದಿತು.
